ದಾಳಿ ನಡೆಸಲು ಅಧಿಕಾರಿಗಳು ಬರುವಾಗ ಪೆಟ್ರೋಲ್ ಬಂಕ್ ನಾಪತ್ತೆ!

Webdunia
ಮಂಗಳವಾರ, 2 ಮೇ 2017 (09:28 IST)
ಲಕ್ನೋ: ಉತ್ತರ ಪ್ರದೇಶದಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಒಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಲೆಂದು ಬರುವಾಗ ಪೆಟ್ರೋಲ್ ಬಂಕ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು!

 
ಪೆಟ್ರೋಲ್ ಬಂಕ್ ಮೆಷಿನ್ ಗಳನ್ನು ಸ್ಥಳದಿಂದ ಸಾಗಿಸಿ ಅಡಗಿಸಿಟ್ಟ ಆರೋಪಿಗಳು ಅಧಿಕಾರಿಗಳಿಗೇ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಕ್ರಮ ಪೆಟ್ರೋಲ್ ಬಂಕ್ ಗಳ ಮೇಲೆ ಅಧಿಕಾರಿಗಳು ರೇಡ್ ನಡೆಸುತ್ತಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಬರುವಾಗ ಮೆಷಿನ್ ಗಳನ್ನು ಸ್ಥಳಾಂತರಿಸಿದ್ದಲ್ಲದೆ, ಹೆಚ್ಚು ಬೆಲೆ ತೋರಿಸಿ ಕಡಿಮೆ ಪೆಟ್ರೋಲ್ ಒದಗಿಸುವ ವಿಶೇಷ ಸಾಧನವನ್ನೂ ಅಡಗಿಸಿಡಲಾಗಿದೆ. ಕಳೆದ ವಾರ ಉತ್ತರ ಪ್ರದೇಶ ಪೊಲೀಸರು ರಿಮೋಟ್ ಕಂಟ್ರೋಲ್ ಚಾಲಿತ ಚಿಪ್ ಗಳಿಂದ ಜನರಿಗೆ ಮೋಸ ಮಾಡುವ ಜಾಲ ಪತ್ತೆ ಹಚ್ಚಿದ್ದರು.

ಇದರಿಂದಾಗಿ ಪ್ರತಿ ದಿನಕ್ಕೆ 15 ಲಕ್ಷ ರೂ. ಪೆಟ್ರೋಲ್ ಕಳ್ಳತನ ಮಾಡಲಾಗುತ್ತಿತ್ತು. ಈ ಸಂಬಂಧ 9 ಪೆಟ್ರೋಲ್ ಬಂಕ್ ಗಳನ್ನು ಸೀಝ್ ಮಾಡಲಾಗಿತ್ತು. ಅಲ್ಲದೆ 23 ಮಂದಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತುಂಡಾಗಿ ಬಿದ್ದ ವಿದ್ಯುತ್ ತಂತಿ, 900ಕ್ಕೂ ಅಧಿಕ ಅಡಕೆ ಸಸಿಗಳು ನಾಶ

2025ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಅಂಗಾಂಗ ದಾನ, ರಾಷ್ಟ್ರ ಮಟ್ಟದಲ್ಲಿ ಮೂರನೇ ಸ್ಥಾನ

ಸಿಎಂ ಕುರ್ಚಿ ಗುದ್ದಾಟದ ನಡುವೆ ಜನರ ಆಶೀರ್ವಾದವಿರಬೇಕೆಂದ ಸಿದ್ದರಾಮಯ್ಯ, ಭಾರೀ ಕುತೂಹಲ

ಯಾವ ನಾಯಿ ಯಾವ ಮನಸ್ಥಿತಿಯಲ್ಲಿದೆ ಎಂದೂ ಯಾರಿಗೂ ತಿಳಿದಿಲ್ಲ: ಸುಪ್ರೀಂಕೋರ್ಟ್‌

ಬಿಹಾರ: ಹಿಜಾಬ್ ಧರಿಸಿ ಬಂದ್ರೆ ಇನ್ಮುಂದೆ ಆಭರಣದ ಅಂಗಡಿಗೆ ಎಂಟ್ರಿಯಿಲ್ಲ, ಯಾಕೆ ಗೊತ್ತಾ

ಮುಂದಿನ ಸುದ್ದಿ
Show comments