Select Your Language

Notifications

webdunia
webdunia
webdunia
webdunia

ಜೆಎನ್‌ಯು ವಿವಾದ: ರಾಹುಲ್ ಗಾಂಧಿ, ಡಿ, ರಾಜಾ ವಿರುದ್ಧ ಪ್ರಕರಣ

ಜೆಎನ್‌ಯು ವಿವಾದ: ರಾಹುಲ್ ಗಾಂಧಿ, ಡಿ, ರಾಜಾ ವಿರುದ್ಧ ಪ್ರಕರಣ
ಬರೇಲಿ , ಶುಕ್ರವಾರ, 26 ಫೆಬ್ರವರಿ 2016 (16:30 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿಪಿಐ ಪಕ್ಷದ ಕಾರ್ಯದರ್ಶಿ ಡಿ. ರಾಜಾ ವಿರುದ್ಧ ರಾಹುಲ್ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರ ಬರೇಲಿ ನಿವಾಸಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. 
 
ಗಾಂಧಿ ಮತ್ತು ರಾಜಾ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡುವುದರ ಮೂಲಕ 120 ಕೋಟಿ ಭಾರತೀಯರ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಮೂಲಕ ದೇಶದ್ರೋಹವನ್ನೆಸಗಿದ್ದಾರೆ ಎಂದು ದೂರುದಾತ ಪ್ರೇಮ್ ಚಂದ್ ಪಾಲ್(35) ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಆತನ ಅರ್ಜಿ ಸ್ವೀಕರಿಸಿರುವ ಕೋರ್ಟ್ ಈ ಕುರಿತು ವರದಿಯನ್ನು ನೀಡುವಂತೆ ಬರೇಲಿ ಪೊಲೀಸರಿಗೆ ಆದೇಶಿಸಿದ್ದು ಮುಂದಿನ ವಿಚಾರಣೆಯನ್ನು ಮಾರ್ಚ್ 2ಕ್ಕೆ ನಿಗದಿ ಪಡಿಸಿದೆ.
 
ಈ ಕುರಿತಂತೆ ನಾನು ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಪ್ರಯತ್ನಿದ್ದೆ. ಆದರೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಅವರಿಗೆ ಪ್ರಬಲ ರಾಜಕಾರಣಿಗಳ ಭಯ ಎಂದು ದೂರುದಾತ ಆರೋಪಿಸಿದ್ದಾನೆ. 

Share this Story:

Follow Webdunia kannada