ಕಾಲೋನಿಯ ಪಾರ್ಕ್ಗಳಲ್ಲಿ ಸಾಕುಪ್ರಾಣಿಗಳಿಂದ ಮಲವಿಸರ್ಜನೆ ಮಾಡಿಸಿದರೆ, ಅಂತಹ ಮಾಲೀಕರ ಮೇಲೆ 21,000 ದಂಡ ವಿಧಿಸಲು ನೋಯ್ಡಾದ ಬೀಟಾ ಸೆಕ್ಟರ್- 1 ನಾಗರಿಕ ಹಿತರಕ್ಷಣಾ ಸಂಘ (RWA) ನಿರ್ಧರಿಸಿದೆ.
ತಮ್ಮ ಸಾಕುಪ್ರಾಣಿಗಳನ್ನು ಸುತ್ತಾಡಿಸಲು ಕರೆದುಕೊಂಡು ಬಂದು ಸೂಕ್ಷ್ಮವಲ್ಲದ ವರ್ತನೆ ತೋರುತ್ತಿರುವ ನಿವಾಸಿಗಳ ಹೊಣೆಗೇಡಿತನ ಮತ್ತು ಈ ಸಮಸ್ಯೆ ಕಂಡು ಕಾಣದಂತೆ ನಡೆದುಕೊಳ್ಳುತ್ತಿರುವ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಕುರುಡುತನ ಈ ನಿರ್ಧಾರಕ್ಕೆ ಬರಲು ಕಾರಣವಾಯಿತು ಎಂದು ನಾಗರಿಕ ಹಿತರಕ್ಷಣಾ ಸಂಘದ ಸದಸ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಘದ ಪ್ರಧಾನ ಕಾರ್ಯದರ್ಶಿ ಹರಿಂಧರ್ ಭಾತಿ, ಈ ಸೆಕ್ಟರ್ನಲ್ಲಿ 1,800 ಮನೆಗಳಿದ್ದು, ಹೆಚ್ಚಿನವರು ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಹೊಂದಿದ್ದಾರೆ. ನಮ್ಮ ಇಲಾಖೆಯಲ್ಲಿರುವ 8 ಪಾರ್ಕ್ಗಳನ್ನು ಸ್ವಚ್ಛವಾಗಿಡುವಲ್ಲಿ ಸಹಕರಿಸುವಂತೆ ನಾವು ನಾಯಿ ಮಾಲೀಕರಿಗೆ ಮನವರಿಕೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸಿದೆವು. ಆದರೆ ಅವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಉದ್ಯಾನವನಗಳು ಇರುವುದು ಜನಸಮುದಾಯದವರಿಗಾಗಿ. ಸಾಕುನಾಯಿಗಳಿಂದ ಹಾಳುಗೆಡುವುದ್ದಕ್ಕಲ್ಲ ಎಂದಿದ್ದಾರೆ.
ಈ ದಂಡದ ಕುರಿತು ನಾಯಿಗಳ ಮಾಲೀಕರಿಗೆ ಎಚ್ಚರಿಕೆ ನೀಡಲು, ಎರಡು ದಿನಗಳೊಳಗಾಗಿ ಪ್ರತಿ ಪಾರ್ಕ್ನಲ್ಲಿ 2 ನಾಮಫಲಕಗಳನ್ನು ನೆಡುತ್ತಿದ್ದೇವೆ ಎಂದು ಭಾಟಿ ತಿಳಿಸಿದ್ದಾರೆ.