Webdunia - Bharat's app for daily news and videos

Install App

ಬಿಜೆಪಿ ರಾಜಕೀಯ ಸಂಚಿನಿಂದ ನನ್ನ ಬಂಧನವಾಗಿದೆ: ತೋಮರ್

Webdunia
ಶುಕ್ರವಾರ, 24 ಜುಲೈ 2015 (19:19 IST)
ನಕಲಿ ಅಂಕಪಟ್ಟಿ ಪ್ರಕರಣದಲ್ಲಿ ಎರಡು ತಿಂಗಳುಗಳ ಕಾಲ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್, ಬಿಜೆಪಿ ಪಕ್ಷದ ರಾಜಕೀಯ ಸಂಚಿನಿಂದಾಗಿ ನನ್ನ ಬಂಧನವಾಗಿದೆ ಎಂದು ಹೇಳಿದ್ದಾರೆ. 
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ನಿಮ್ಮನ್ನು ಬೆಂಬಲಿಸುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಧ್ಯಮಗಳು ಮತ್ತು ಪೊಲೀಸರ ಕಟ್ಟುಕಥೆಗಳು ಅವರ ಮೇಲೆ ಪರಿಣಾಮ ಬೀರಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
 
ನನ್ನ ಬಂಧನದ ಹಿಂದಿನ ರಾಜಕೀಯ ಸಂಚಿನ ಬಗ್ಗೆ ಜನತೆಗೆ ಮಾಹಿತಿ ನೀಡುತ್ತೇನೆ. ಬಿಜೆಪಿ ನನ್ನ ವಿರುದ್ಧ ಸಂಚು ನಡೆಸಿದ್ದರಿಂದ ನನ್ನ ಬಂಧನವಾಗಿದೆ ಎಂದು ತಿಳಿಸಿದ್ದಾರೆ. 
 
ಕಳೆದ ಜೂನ್ 9 ರಂದು ಬಂಧನಕ್ಕೊಳಗಾಗಿದ್ದ ತೋಮರ್, ನಿನ್ನೆ ಹಲವಾರು ಷರತ್ತುಗಳೊಂದಿಗೆ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. 
 
ಅರವಿಂದ್ ಕೇಜ್ರಿವಾಲ್ ನನ್ನ ನಾಯಕ ಮತ್ತು ನಮ್ಮ ಮುಖ್ಯಮಂತ್ರಿ. ಮಾಧ್ಯಮಗಳ ವರದಿಗಳಿಂದ ಅವರಿಗೆ ಬೇಸರವಾಗಿರಬಹುದು. ನಾನು ಆಮ್ ಆದ್ಮಿ ಪಕ್ಷದಲ್ಲಿಯೇ ಇದ್ದೇನೆ. ಕೇಜ್ರಿವಾಲ್ ಯಾವ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧ ಎಂದು ಹೇಳಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments