Select Your Language

Notifications

webdunia
webdunia
webdunia
webdunia

ಬದಲಾವಣೆ ಬಯಸಿ ಜನರು ಮತ ನೀಡಿದ್ದಾರೆ: ರಾಹುಲ್ ಗಾಂಧಿ

ಬದಲಾವಣೆ ಬಯಸಿ  ಜನರು ಮತ ನೀಡಿದ್ದಾರೆ: ರಾಹುಲ್ ಗಾಂಧಿ
ನವದೆಹಲಿ , ಮಂಗಳವಾರ, 21 ಅಕ್ಟೋಬರ್ 2014 (18:19 IST)
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಸಮಗ್ರವಾಗಿ ಧೂಳೀಪಟವಾಗಿದೆ ಎಂಬುದು ಸ್ಪಷ್ಟವಾಗಿದ್ದು, ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜನರು ಬದಲಾವಣೆ ಬಯಸಿ ಮತ ನೀಡಿದ್ದಾರೆ  ಎಂದು ಹೇಳಿದ್ದಾರೆ. 

ಆಂಧ್ರಪ್ರದೇಶದಲ್ಲಿ ಚಂಡಮಾರುತ ಸಂತ್ರಸ್ತರನ್ನು ಭೇಟಿಯಾಗಿ ಮಾತನಾಡುತ್ತಿದ್ದ  ರಾಹುಲ್ ಗಾಂಧಿ ಜನರು ಬದಲಾವಣೆ ಬಯಸಿ ಮತ ನೀಡಿದ್ದಾರೆ, ಜನರ ವಿಶ್ವಾಸವನ್ನು ಮರಳಿ ಗಳಿಸಲು ಪಕ್ಷ ಕಠಿಣ ಪರಿಶ್ರಮ ಪಡಲಿದೆ ಎಂದರು.
 
ಸಾರ್ವಜನಿಕವಾಗಿ ರಾಹುಲ್  ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿರಬಹುದು. ಆದರೆ ತೆರೆಮರೆಯಲ್ಲಿ ಈ ಸೋಲಿಗೆ ಭೂಪಿಂದರ್ ಸಿಂಗ್ ಹೂಡಾ ಮತ್ತು ಪೃಥ್ವಿರಾಜ್ ಚವಾಣ್ ಅವರನ್ನು ಗುರಿ ಮಾಡಲಾಗುತ್ತಿದೆ. 
 
ಕಳೆದ ಡಿಸೆಂಬರ್‌ನಲ್ಲಿ ನಡೆದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಸೋಲಿನ ನಂತರ, ರಾಹುಲ್ ಪಕ್ಷದ ಸಾಂಸ್ಥಿಕ ರೂಪಾಂತರ ಮತ್ತು  ಜನರನ್ನು ತಮ್ಮ ಜತೆ ಸೇರಿಸಿಕೊಂಡು ಕಲ್ಪನೆ ಮೀರಿ ಕೆಲಸ ಮಾಡುವ ವಾಗ್ದಾನ ಮಾಡಿದ್ದರು. ಆದರೆ ಭಾನುವಾರದ ಸೋಲಿನ ನಂತರ ಅವರು ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಲಿನ ಹೊಣೆಗಾರಿಕೆ ತೆಗೆದುಕೊಳ್ಳದೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ಪ್ರಯತ್ನಿಸಿದರು.
 
ಆದರೆ ಪಕ್ಷದ ನಾಯಕರು ಮಾತ್ರ ತಮ್ಮ ಪಾರ್ಟಿ ಉಪಾಧ್ಯಕ್ಷ ಸ್ವತಃ ಬದಲಾಗಬೇಕು. ನಿಷ್ಕ್ರಿಯ ಪ್ರೇಕ್ಷಕನಂತೆ ವರ್ತಿಸದೇ ಸಂಪೂರ್ಣ ನಿಯಂತ್ರಣ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ತದ ನಂತರ ಪಕ್ಷಕ್ಕೆ ಮರುಜೀವ ನೀಡಬಹುದು ಎಂಬ ಮಾತುಗಳನ್ನಾಡಿದ್ದಾರೆ. 
 
ಮೂಲಗಳ ಪ್ರಕಾರ ರಾಹುಲ್ ಸಹ ಹಾಗೇ ಮಾಡಲು ಯೋಜಿಸಿದ್ದಾರೆ. ಮುಂದಿನ ಹದಿನೈದು ದಿನಗಳೊಳಗೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಸಭೆಯನ್ನು ಕರೆದು ಪಕ್ಷದ ಶ್ರೇಣಿಯಲ್ಲಿ ಬಹುನಿರೀಕ್ಷಿತ ಬದಲಾವಣೆಗಳನ್ನು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಆದರೆ ಸದ್ಯದಲ್ಲಿ ಪಕ್ಷದಲ್ಲಿರುವ ವ್ಯಾಕುಲತೆ ಬ್ಲೇಮ್( ಆಕ್ಷೇಪಣೆ) ಗೇಮ್ ಸ್ಫೋಟಗೊಳ್ಳುವ ಬೆದರಿಕೆ. ಹಿರಿಯ ನಾಯಕರಲ್ಲಿ ಯಾರು ಕೂಡ ರಾಹುಲ್ ಅಥವಾ ಸೋನಿಯಾರನ್ನು ದೂರುವುದಿಲ್ಲ ಎಂದು ನಿರೀಕ್ಷಿಸಲಾಗಿದೆಯಾದರೂ, ಪರೋಕ್ಷವಾಗಿ ಬೆರಳುಗಳು ನಾಯಕತ್ವದ ಕಡೆ ತೋರಿಸುತ್ತಿವೆ. 

Share this Story:

Follow Webdunia kannada