Webdunia - Bharat's app for daily news and videos

Install App

Pehlagam ಪ್ರವಾಸಿಗರ ರಕ್ಷಣೆಗೆ ಹೋಗಿ ಜೀವ ಕಳೆದುಕೊಂಡ ಮುಸ್ಲಿಂ ಯುವಕ, ತಂದೆಯ ಮಾತು ಕೇಳಿದ್ರೆ ಮೈ ರೋಮಾಂಚನ

Sampriya
ಗುರುವಾರ, 24 ಏಪ್ರಿಲ್ 2025 (18:20 IST)
Photo Credit X
ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಪಹಲ್ಗಾಮ್‌ನಲ್ಲಿ ನಡೆದ ದಾಳಿ ವೇಳೆ  ಪ್ರವಾಸಿಗರನ್ನು ರಕ್ಷಿಸಲು ಹೋಗಿ  ತನ್ನ ಪ್ರಾಣವನ್ನು ತ್ಯಾಗ ಮಾಡಿದ ಸೈಯದ್ ಆದಿಲ್ ಹುಸೇನ್ ಶಾ ಅವರ ತಂದೆ ಹೈದರ್ ಶಾ, ತನ್ನ ಮಗನ ವೀರ ಮರಣದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಹೈದರ್ ಶಾ, ತನ್ನ ಮಗನನ್ನು ಕಳೆದುಕೊಂಡ ದುಃಖದ ಹೊರತಾಗಿಯೂ, ಆದಿಲ್‌ನ ಶೌರ್ಯದಿಂದ ಶಕ್ತಿಯನ್ನು ಪಡೆದುಕೊಂಡಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ನನ್ನ ಮಗ ಮತ್ತು ಸೋದರಸಂಬಂಧಿ ಆಸ್ಪತ್ರೆಯಲ್ಲಿದ್ದಾರೆ ಎಂದು ನಮಗೆ ಸಂಜೆ 6 ಗಂಟೆ ಸುಮಾರಿಗೆ ತಿಳಿಯಿತು. ಅವನನ್ನು ಹುಡುಕಲು ಹೋದ ಜನರು ಘಟನೆಯ ಬಗ್ಗೆ ನನಗೆ ತಿಳಿಸಿದರು.

"ನನಗೆ ಅವನ ಮತ್ತು ಅವನ ಶಹಾದತ್ (ತ್ಯಾಗ) ಬಗ್ಗೆ ಹೆಮ್ಮೆ ಇದೆ. ಆ ಹೆಮ್ಮೆಯಿಂದ ನಾನು ಜೀವಂತವಾಗಿರುವುದು. ಇಲ್ಲದಿದ್ದರೆ ಅವನ ನಿರ್ಜೀವ ದೇಹವನ್ನು ನೋಡಿದ ತಕ್ಷಣ ನಾನು ಕೊನೆಯುಸಿರೆಳೆಯುತ್ತಿದೆ ಎಂದು ಹೇಳಿದರು.

ದಾಳಿಯ ಬಳಿಕ ನಾವು ಆದಿಲ್ ನಂಬರ್‌ಗೆ ಕರೆ ಮಾಡಿದೆವು. ಆದರೆ ಆತ ಸಂಪರ್ಕಕ್ಕೆ ಸಿಲುಕಲಿಲ್ಲ. ನಾವು ಆತ ನೆಟ್‌ವರ್ಕ್‌ ಕ್ಷೇತ್ರದಲ್ಲಿಲ್ಲ ಎಂದು ಭಾವಿಸಿದೆವು. ಆದರೆ ಕೆಲವು ಗಂಟೆಗಳ ಬಳಿಕ ಕಠೋರವಾದ ಸುದ್ದಿಯನ್ನು ಕೇಳಬೇಕಾಯಿತು ಎಂದು ಘಟನೆಯನ್ನು ವಿವರಿಸಿದರು.

ಯುವ ಪೋನಿ ಹ್ಯಾಂಡ್ಲರ್ ಸೈಯದ್ ಆದಿಲ್ ಹುಸೇನ್ ಷಾ ಅವರ ತಾಯಿ ಕೂಡ ಎಎನ್‌ಐ ಜೊತೆ ತೀವ್ರ ದುಃಖದಲ್ಲಿ ಮಾತನಾಡಿದ್ದಾರೆ, ಮನೆಗೆ ಆಧಾರ ಸ್ತಂಭವಾಗಿದ್ದ ತಮ್ಮ ಹಿರಿಯ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದೇವೆ. ನಮಗೆ ನ್ಯಾಯ ಬೇಕೆಂದು ಮನವಿ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pahalgam Terror Attack: ವಾಘಾ ಅಟ್ಟಾರಿ ಗಡಿ ಬಂದ್‌ನಿಂದ ಪಾಕ್‌ನ ಮೇಲೆ ಬೀರುವ ಪರಿಣಾಮಗಳು

ಪಾಕಿಸ್ತಾನ ಗಡಿ ಬಳಿ ಬಂದು ನಿಂತ INS Vikrant: ಈ ಯುದ್ಧ ನೌಕೆಯ ವಿಶೇಷತೆಗಳೇನು ನೋಡಿ

INS Vikrant ರೆಡಿ: ಭಾರತೀಯ ನೌಕಾ ಸೇನೆ ತೆರೆಮರೆಯ ಸಿದ್ಧತೆ ಶುರು

Pahalgam Terror Attack: ಪ್ರೀತಿಗಾಗಿ ಪಾಕ್ ಬಿಟ್ಟು ಬಂದ ಸೀಮಾ ಹೈದರ್‌ ಕೂಡಾ 48 ಗಂಟೆಯಲ್ಲಿ ಭಾರತ ಬಿಟ್ಟು ಹೋಗಬೇಕಾ

ಅಪ್ಪ ಎಲ್ಲಿದ್ದಾನೆ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಸಾವನ್ನಪ್ಪಿದ ಬಿತನ್ ಪುತ್ರನ ಮಾತು ಕೇಳಕ್ಕಾಗಲ್ಲ

ಮುಂದಿನ ಸುದ್ದಿ
Show comments