Select Your Language

Notifications

webdunia
webdunia
webdunia
webdunia

ಜನತೆಯ ವಿಶ್ವಾಸ ಕಳೆದುಕೊಂಡ ಪಿಡಿಪಿ-ಬಿಜೆಪಿ ಸರಕಾರ: ಒಮರ್ ಅಬ್ದುಲ್ಲಾ

ಜನತೆಯ ವಿಶ್ವಾಸ ಕಳೆದುಕೊಂಡ ಪಿಡಿಪಿ-ಬಿಜೆಪಿ ಸರಕಾರ: ಒಮರ್ ಅಬ್ದುಲ್ಲಾ
ಜಮ್ಮು , ಶುಕ್ರವಾರ, 27 ನವೆಂಬರ್ 2015 (19:28 IST)
ಜಮ್ಮು ಕಾಶ್ಮಿರದಲ್ಲಿರುವ ಪಿಡಿಪಿ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರ ಜನತೆಯ ವಿಶ್ವಾಸ ಕಳೆದುಕೊಂಡಿದೆ ಎಂದು ನ್ಯಾಷನಲ್ ಕಾನ್ಫ್‌ರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
 
ಪಿಡಿಪಿಯ ನಿಜವಾದ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲ, ಅಸಮರ್ಥ ನಾಯಕತ್ವದಿಂದಾಗಿ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
 
ಒಂದು ಕಡೆ ಮುಫ್ತಿ ಮೊಹಮ್ಮದ್ ಸಯೀದ್ ಜಮ್ಮು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಮತ್ತೊಂದೆಡೆ ಅವರ ಪುತ್ರಿ ಮೆಹಬೂಬಾ ಶ್ರೀನಗರದಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿ ಸರಕಾರದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಲೇವಡಿ ಮಾಡಿದರು. 
 
ಒಂದು ವೇಳೆ, ಇದೀಗ ವಿಧಾನಸಭೆಗೆ ಚುನಾವಣೆ ನಡೆದಲ್ಲಿ ನ್ಯಾಷನಲ್ ಕಾನ್ಫ್‌ರೆನ್ಸ್ ಪಕ್ಷ ಇತರ ಪಕ್ಷಗಳೊಂದಿಗೆ ಮೈತ್ರಿಯಿಲ್ಲದೇ  ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಶ್ರೀನಗರ್-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಮ್‌ಬನ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಒಮರ್, ಪಿಡಿಪಿ ನಾಯಕತ್ವದ ಅಸ್ಥಿರತೆಯಿಂದಾಗಿ ಅಡಳಿತ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಯಾರು ನಿಜವಾದ ಮುಖ್ಯಮಂತ್ರಿ ಎನ್ನುವ ಗೊಂದಲಕ್ಕೆ ಸಿಲುಕಿದೆ ಎಂದು ಲೇವಡಿ ಮಾಡಿದರು.
 
ಸಮ್ಮಿಶ್ರ ಸರಕಾರದ ಅಂತರಿಕ ವ್ಯವಹಾರಗಳ ಬಗ್ಗೆ ನಮಗೆ ಆಸಕ್ತಿಯಿಲ್ಲ. ಮುಫ್ತಿ ಮೊಹಮ್ಮದ್ ಆಗಿರಲಿ ಅಥವಾ ಮೆಹಬೂಬಾ ಮುಫ್ತಿಯಾಗಿರಲಿ. ಆದರೆ, ಮುಖ್ಯ ವಿಷಯವೆಂದರೆ ಜನತೆ ಸಂಕಷ್ಟಕ್ಕೆ ಈಡಾಗಿರುವುದು ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

Share this Story:

Follow Webdunia kannada