Webdunia - Bharat's app for daily news and videos

Install App

ಚಿತ್ರರಂಗ ವಿರೋಧಿಸಿದ್ದ ಮಸೂದೆಗೆ ಸಂಸತ್ ಅಸ್ತು!

Webdunia
ಮಂಗಳವಾರ, 10 ಆಗಸ್ಟ್ 2021 (12:25 IST)
ನವದೆಹಲಿ(ಆ.10): ಕೊನೆಗೂ ಚಿತ್ರರಂಗದ ವಿರೋಧಿಸಿದ್ದ ಸಿನಿಮಾಟೋಗ್ರಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಕೇಂದ್ರೀಯ ಸಿನಿಮಾ ಪ್ರಮಾಣಪತ್ರ ಮಂಡಳಿ (ಸಿಬಿಎಫ್ಸಿ)ಯಿಂದ ಅನುಮೋದನೆ ಪಡೆದ ಚಿತ್ರ ಬಿಡುಗಡೆ ಆದ ನಂತರವೂ ಅದರ ಪ್ರಮಾಣಪತ್ರ ಮರುಪರಿಶೀಲಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಮಸೂದೆ ಇದಾಗಿದೆ.

ಸೋಮವಾರದ ರಾಜ್ಯಸಭೆಯಲ್ಲಿ ಸಿನಿಮಾ ಪ್ರಮಾಣಪತ್ರ ಮೇಲ್ಮನವಿ ನ್ಯಾಯಾಧಿಕರಣ (ಎಫ್ಸಿಎಟಿ) ಸೇರಿದಂತೆ ಒಟ್ಟಾರೆ 9 ಮೇಲ್ಮನವಿ ನ್ಯಾಯಾಧಿಕರಣಗಳನ್ನು ರದ್ದುಗೊಳಿಸುವ ಮಸೂದೆಗೆ ಕೇಂದ್ರ ಅನುಮೋದನೆ ಪಡೆದಿದೆ.
ಕೇಂದ್ರದ ಈ ಕ್ರಮದಿಂದಾಗಿ 1952ರ ಸಿನಿಮಾಟೋಗ್ರಾಫ್ ಕಾಯ್ದೆ ತಿದ್ದುಪಡಿಯಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿನಿಮಾ ಕುರಿತಾಗಿ ಕೇಂದ್ರೀಯ ಸಿನಿಮಾ ಪ್ರಮಾಣಪತ್ರ ಮಂಡಳಿ(ಸಿಬಿಎಫ್ಸಿ)ಯಿಂದ ಏನೇ ಸಮಸ್ಯೆ ಏರ್ಪಟ್ಟರೂ ಆ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಿನಿಮಾ ನಿರ್ಮಾಪಕರು ಸಿನಿಮಾ ಪ್ರಮಾಣಪತ್ರ ಮೇಲ್ಮನವಿ ನ್ಯಾಯಾಧಿಕರಣದ ಮೊರೆ ಹೋಗುವಂತಿಲ್ಲ. ಬದಲಾಗಿ ಹೈಕೋರ್ಟ್ಗಳ ಮೊರೆ ಹೋಗಬೇಕು. ಆದರೆ ಈಗಾಗಲೇ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದುಕೊಂಡಿದ್ದು, ಅವುಗಳ ನಡುವೆ ತಮ್ಮ ವ್ಯಾಜ್ಯವನ್ನು ನ್ಯಾಯಾಲಯಗಳು ಕೈಗೆತ್ತಿಕೊಳ್ಳಲು ಸಾಕಷ್ಟುವಿಳಂಬವಾಗಲಿದೆ ಎಂಬುದು ಸಿನಿಮಾ ನಿರ್ಮಾಪಕರ ಆತಂಕವಾಗಿದೆ.
ಅಲ್ಲದೆ ಸಿಬಿಎಫ್ಸಿಯಿಂದ ಅನುಮೋದನೆ ಪಡೆದ ಸಿನಿಮಾಗಳ ಪ್ರಮಾಣಪತ್ರಗಳನ್ನು ಮರು ಪರಿಶೀಲಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಅಂಶವೂ ಇದರಲ್ಲಿದೆ. ಇದೇ ಕಾರಣಕ್ಕೆ ಎಫ್ಸಿಎಟಿ ರದ್ದುಗೊಳಿಸುವ ಕೇಂದ್ರದ ಕ್ರಮದ ವಿರುದ್ಧ ಈ ಹಿಂದೆ ಸಿನಿಮಾ ನಿರ್ಮಾಪಕರಾದ ಹನ್ಸಲ್ ಮೆಹ್ತಾ, ವಿಶಾಲ್ ಭಾರದ್ವಜ್ ಹಾಗೂ ಅನುರಾಗ್ ಕಶ್ಯಪ್, ತಮಿಳು ನಟ ಕಮಲ್ ಹಾಸನ್ ಸೇರಿದಂತೆ ಇನ್ನಿತರರು ಅಸಮಾಧಾನ ವ್ಯಕ್ತಪಡಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Liverpool Univesity: ಯುಕೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಮಾಡಬೇಕುನ್ನುವವರಿಗೆ Good News

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರೊಪೆಸರ್‌ಗೆ ಬಿಗ್‌ ರಿಲೀಫ್‌

Operation Sindoor ಬಳಿಕ ಮತ್ತೇ ಅಣಕು ಪ್ರದರ್ಶನದಲ್ಲಿ ತೊಡಗಿದ ಭಾರತ, ಇದರ ಅರ್ಥವೇನು

Bantwal Abdul Rahim Case: ಬಿಜೆಪಿ ಶವಗಳ ಮೇಲೆ ರಾಜಕೀಯ ಮಾಡುತ್ತಿದೆ, ದಿನೇಶ್‌ ಗುಂಡೂರಾವ್‌

Abdul Rahim Case: 15 ಮಂದಿಯ ವಿರುದ್ಧ ಬಿತ್ತು ಎಫ್‌ಐಆರ್‌, ಚುರುಕುಗೊಂಡ ತನಿಖೆ

ಮುಂದಿನ ಸುದ್ದಿ
Show comments