Select Your Language

Notifications

webdunia
webdunia
webdunia
webdunia

ಪಾಕ್‌ನಿಂದ ಹೊಸ ನೋಟುಗಳನ್ನು ನಕಲಿ ಮಾಡಲಾಗದು: ಗುಪ್ತಚರ ಸಂಸ್ಥೆ

ಪಾಕ್‌ನಿಂದ ಹೊಸ ನೋಟುಗಳನ್ನು ನಕಲಿ ಮಾಡಲಾಗದು: ಗುಪ್ತಚರ ಸಂಸ್ಥೆ
ನವದೆಹಲಿ , ಗುರುವಾರ, 10 ನವೆಂಬರ್ 2016 (16:49 IST)
ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯಿಂದ ನಲುಗಿ ಹೋಗಿದ್ದ ಪಾಕಿಸ್ತಾನಕ್ಕೆ ಮಾಸ್ಟರ್ ಸ್ಟ್ರೋಕ್ ಮೂಲಕ ಪ್ರಧಾನಿ ಮೋದಿ ಮತ್ತೊಂದು ಆಘಾತವನ್ನು ನೀಡಿದ್ದಾರೆ. 500 ಮತ್ತು 1,000ರೂಪಾಯಿಗಳ ಮೇಲೆ ನಿಷೇಧ ಹೇರಿರುವುದಿಂದ ಪಾಕಿಸ್ತಾನದಲ್ಲಿ ಮುದ್ರಣಗೊಂಡು ಉಗ್ರರಿಗೆ ಪೂರೈಸಲಾಗುತ್ತಿದ್ದ ನಕಲಿ ನೋಟಿನ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದಂತಾಗಿದೆ.
ಪಾಕಿಸ್ತಾನದ ಪೇಶಾವರದಲ್ಲಿ ನಕಲಿ ರೂಪಾಯಿಗಳು ಉತ್ಪಾದನೆಯಾಗುತ್ತಿದ್ದವು. ಇದನ್ನು ಭಯೋತ್ಪಾದಕ ಸಂಘಟನೆಗಳಿಗೆ ಪೂರೈಸಲಾಗುತ್ತಿತ್ತು. ಪ್ರಧಾನಿ ಮೋದಿ ದಿಢೀರ್ ನಿರ್ಧಾರದಿಂದ ಈ ಖೋಟಾ ನೋಟು ದಂಧೆಗೆ ಭಾರಿ ಹೊಡೆತ ಬಿದ್ದಿದೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. 
 
ಭಾರತೀಯ ರಿಸರ್ವ್ ಬ್ಯಾಂಕ್ ಹೊಸದಾಗಿ ಜಾರಿಗೆ ತಂದಿರುವ 500 ಮತ್ತು 1,000ರೂಪಾಯಿಗಳನ್ನು ಪಾಕಿಸ್ತಾನ ಸೇರಿದಂತೆ ಯಾರು ಕೂಡ ನಕಲು ಮಾಡುವುದು ಕಷ್ಟ. ನಾವಿದನ್ನು ಸತತ 6 ತಿಂಗಳಿಂದ ಪರಿಶೀಲಿಸಲಿದ್ದೇವೆ ಎಂದಿರುವ ಗುಪ್ತಚರ ಇಲಾಖೆ ಈ ನೋಟಿನಲ್ಲಿ ಅಂತಹ ವಿಶೇಷತೆ ಏನಿದೆ ಎಂಬುದನ್ನು ಮಾತ್ರ ಬಹಿರಂಗ ಪಡಿಸಲು ನಿರಾಕರಿಸಿದೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಯುಎಸ್ ಹೌಸ್‌ಗೆ ಆಯ್ಕೆಯಾದ ಪ್ರಥಮ ಇಂಡಿಯನ್- ಅಮೇರಿಕನ್ ಮಹಿಳೆ ಈಕೆ