Select Your Language

Notifications

webdunia
webdunia
webdunia
webdunia

ಮೋದಿಯವರೇ ಪಾಕ್‌ಗೆ ತಕ್ಕ ಪಾಠ ಕಲಿಸಿ: ಬಾಬಾ ರಾಮದೇವ್

ಮೋದಿಯವರೇ ಪಾಕ್‌ಗೆ ತಕ್ಕ ಪಾಠ ಕಲಿಸಿ: ಬಾಬಾ ರಾಮದೇವ್
ನವದೆಹಲಿ , ಬುಧವಾರ, 23 ಜುಲೈ 2014 (11:29 IST)
ಭಾರತ- ಪಾಕ್ ಗಡಿಯಲ್ಲಿ ನಡೆದ ಗೋಲಿಬಾರ್‌ನಲ್ಲಿ ಭಾರತೀಯ ಸೈನಿಕನೊಬ್ಬ ಸಾವಿಗೀಡಾದ ಘಟನೆಯಿಂದ ವಿಹ್ವಲರಾಗಿರುವ ಯೋಗಗುರು ಬಾಬಾ ರಾಮದೇವ್ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕಾಗಿದೆ.  ಈ ವಿಷಯದಲ್ಲಿ ಪ್ರಧಾನಿ ಮೋದಿಯವರು ಯಾವುದೇ ಮಾರ್ಗವನ್ನು ಅನುಸರಿಸಿದರೂ ದೇಶ ಅವರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. 

ಕೇಂದ್ರ ಮಂತ್ರಿ  ಕಲರಾಜ್ ಮಿಶ್ರಾ ಬರೆದ ಹಿಂದುತ್ವ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ವೇದಿಕೆಯಲ್ಲಿ ಮಾತನಾಡುತ್ತಿದ್ದ ಬಾಬಾ  "ಪಾಕ್‌ಗೆ  ತಕ್ಕ ಪಾಠ ಕಲಿಸಬೇಕಿದೆ. ದೇಶದ ಅಖಂಡತೆಯನ್ನು ಉಳಿಸಲು ಪ್ರಧಾನಿಯವರು ಯಾವುದೇ ದಾರಿಯನ್ನು ಅನುಸರಿಸಿದರೂ ರಾಷ್ಟ್ರ ಅವರ ಹಿಂದೆ ನಿಲ್ಲಲಿದೆ" .
 
"ಮೋದಿಯವರು ದೇಶವಾಸಿಗಳ ನಿರೀಕ್ಷೆಗಳನ್ನು ಸಾಕಾರಗೊಳಿಸುತ್ತಾರೆಯೇ ಎಂದು ಜನರು ನನ್ನ ಬಳಿ ಪ್ರಶ್ನಿಸುತ್ತಾರೆ. ಅವರು  ಚಿಂತನೆ ಮತ್ತು ವರ್ತನೆಯಲ್ಲಿ ಶಾಂತ ಸ್ವಭಾವದವರಿರಬಹುದು. ಆದರೆ ನಿಶ್ಚಿತವಾಗಿ ಅವರು ದೇಶದ ಭವಿಷ್ಯವನ್ನು ಬದಲಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ" ಎಂದರು. 
 
ಮೋದಿಯವರ ಅಭೂತಪೂರ್ಣ ಗೆಲುವಿಗೆ ಕಾರಣವಾದ ಲೋಕಸಭಾ ಚುನಾವಣೆಯಲ್ಲಿ  ಬಾಬಾರವರು ಮೋದಿಯವರಿಗೆ ಬಹಿರಂಗ ಬೆಂಬಲವನ್ನು ನೀಡಿದ್ದರು. 

Share this Story:

Follow Webdunia kannada