Select Your Language

Notifications

webdunia
webdunia
webdunia
webdunia

ಪಾಕ್ ಪ್ರಧಾನಿಯ ಹುಂಬತನ: ಬೇಡವಂತೆ ಭಾರತದ ಕಾರು....

ಪಾಕ್ ಪ್ರಧಾನಿಯ ಹುಂಬತನ: ಬೇಡವಂತೆ ಭಾರತದ ಕಾರು....
ಕಠ್ಮಂಡು , ಮಂಗಳವಾರ, 18 ನವೆಂಬರ್ 2014 (12:02 IST)
ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್, ಕಠ್ಮಂಡುವಿನಲ್ಲಿ ಮುಂದಿನ ವಾರ ನಡೆಯಲಿರುವ ಸಾರ್ಕ್ ಶೃಂಗಸಭೆಗಾಗಿ ಭಾರತ ಒದಗಿಸುತ್ತಿರುವ ಗುಂಡು ನಿರೋಧಕ ಕಾರು ತನಗೆ ಬೇಡವೆಂದು ಹೇಳಿದ್ದಾರೆ. ಬದಲಾಗಿ 'ನಾನು ನನ್ನ ಸ್ವಂತ ಕಾರನ್ನೇ ತರುತ್ತೇನೆ' ಎನ್ನುವುದರ ಮೂಲಕ ಹುಂಬತನವನ್ನು ಮೆರೆದಿದ್ದಾರೆ.

ಮುಂದಿನ ವಾರ ನೇಪಾಳದಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಎಲ್ಲ ನಾಯಕರಿಗೂ ಕಾರನ್ನು ಭಾರತ ಒದಗಿಸುತ್ತಿದೆ. ಆದರೆ ಷರೀಫ್ ಮಾತ್ರ, ಭಾರತದ ಕಾರನ್ನು ತಿರಸ್ಕರಿಸಿದ್ದಾರೆ. 
 
ಪಾಕಿಸ್ತಾನದ ಪ್ರಧಾನಿ ಶರೀಫ್ ಶೃಂಗಸಭೆ ಸಂದರ್ಭದಲ್ಲಿ ತಮ್ಮದೇ ಬುಲೆಟ್ ಪ್ರೂಫ್ ಕಾರ್ ತರಲಿದ್ದಾರೆ ಎಂಬ ಮಾಹಿತಿ ಸ್ವೀಕರಿಸಿದ್ದೇವೆ," ಎಂದು ವಿದೇಶಾಂಗ ಸಚಿವಾಲಯದ ವಕ್ತಾರ  ಖಾಗ್ನಾಥ್ ಅಧಿಕಾರಿ ತಿಳಿಸಿದ್ದಾರೆ.
 
"ಸಭೆಯ ಆತಿಥ್ಯ ವಹಿಸಿಕೊಂಡಿರುವ ನಾವು ವಿವಿಧ ದೇಶಗಳ ಮುಖ್ಯಸ್ಥರ ಮತ್ತು ಪ್ರತಿನಿಧಿಗಳ ವಾಹನ, ಊಟ ಮತ್ತು ಆಹಾರ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಯಾರಾದರೂ ತಮ್ಮದೇ ವಾಹನದಲ್ಲಿ ಬರವುದಕ್ಕೆ ಆದ್ಯತೆನೀಡಿದರೆ ನಮಗೇನು ಅಭ್ಯಂತರವಿಲ್ಲ, " ಎಂದು ಅಧಿಕಾರಿ ತಿಳಿಸಿದ್ದಾರೆ.
 
ನವೆಂಬರ್ 26 ಮತ್ತು 27 ರಂದು ನಡೆಯಲಿರುವ ಸಭೆಯಲ್ಲಿ ಮೋದಿಯವರು ಸಹ ತಮ್ಮದೇ ಬುಲೆಟ್ ಫ್ರೂಪ್ ಕಾರ್ ಬಳಸಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಭಾರತದ ಯಾವುದೇ ಶುಲ್ಕಗಳನ್ನು ವಿಧಿಸದೇ ಸಾರ್ಕ್ ನಾಯಕರಿಗೆ ಶೃಂಗ ಸಭೆ ಸಂದರ್ಭದಲ್ಲಿ ವಿಶೇಷ ಗುಂಡು ನಿರೋಧಕ ವಾಹನಗಳನ್ನು ಒದಗಿಸಿದೆ. ಇತ್ತೀಚಿನ ಮಾದರಿಯ ಆರು ಗುಂಡು ನಿರೋಧಕ  ಕಾರುಗಳು ಸೋಮವಾರ ಕಠ್ಮಂಡುವನ್ನು ತಲುಪಿವೆ. 
 
ನವೆಂಬರ್ 26 ಮತ್ತು 27 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಶೃಂಗಸಭೆಯಲ್ಲಿ  ಅಫಘಾನಿಸ್ಥಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಶ್ರೀಲಂಕಾ, ನೇಪಾಳ, ಭಾರತ ಮತ್ತು ಪಾಕಿಸ್ತಾನದ ನಾಯಕರು ಭಾಗವಹಿಸಲಿದ್ದಾರೆ. 
 
ಭಾರತ-ಪಾಕ್ ಸಮಸ್ಯೆ ಕಳೆದ ಎಲ್ಲ ಸಾರ್ಕ್ ಶೃಂಗಸಭೆಗಳಲ್ಲಿ ಕೂಡ ಅತಿ ಸೂಕ್ಷ್ಮ ಸಮಸ್ಯೆಯಾಗಿಯೇ ಉಳಿದುಕೊಂಡಿದೆ.

Share this Story:

Follow Webdunia kannada