Webdunia - Bharat's app for daily news and videos

Install App

ಪಾಕ್: ಫೇಸ್‌ಬುಕ್‌ನಲ್ಲಿ ಧರ್ಮ ವಿರೋಧಿ ಪೋಷ್ಟ್ ಪ್ರಕಟಿಸಿದ್ದಕ್ಕೆ ಅಜ್ಜಿ ಮತ್ತು ಮೊಮ್ಮಕ್ಕಳ ಹತ್ಯೆ

Webdunia
ಸೋಮವಾರ, 28 ಜುಲೈ 2014 (17:06 IST)
ಫೇಸ್‌ಬುಕ್‌ನಲ್ಲಿ ಧರ್ಮ ವಿರೋಧಿ ಪೋಸ್ಟ್‌ ಪ್ರಕಟಿಸಿದ್ದಕ್ಕೆ ಎರಡು ಕೋಮುಗಳ ನಡುವೆ ನಡೆದ ಸಂಘರ್ಷದಲ್ಲಿ  ನಿರ್ದಿಷ್ಟ ಧರ್ಮದ ಗುಂಪೊಂದು ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳನ್ನು  ಹತ್ಯೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಏರಿಕೆಯಾಗುತ್ತಿರುವುದಕ್ಕೆ ತಾಜಾ ಉದಾಹರಣೆಯಾಗಿದೆ. 
   
ಹತ್ಯೆಯಾದವರಲ್ಲಿ ಏಳು ವರ್ಷದ ಹುಡುಗಿ ಮತ್ತು ಆಕೆಯ ಪುಟ್ಟ ಸಹೋದರಿ ಕೂಡ ಸೇರಿದ್ದು, ಅವರು ಮೊಹಮ್ಮದ್‌ರ ನಂತರ ಬರುವ ಪ್ರವಾದಿಗಳನ್ನಷ್ಟೇ ನಂಬುವ ಅಹ್ಮಮದೀಯ ಪಂಥಕ್ಕೆ ಸೇರಿದ್ದಾರೆ. 1984ರ ಪಾಕಿಸ್ತಾನದ ಕಾನೂನು ಅವರನ್ನು ಮುಸ್ಲಿಮೇತರರು ಎಂದು ಘೋಷಿಸಿದ್ದು,  ಅನೇಕ ಪಾಕಿಸ್ತಾನೀಯರು ಅವರನ್ನು ವಿರೋಧಿ ಧರ್ಮದವರೆಂದು ಪರಿಗಣಿಸುತ್ತಾರೆ.
 
ಪೊಲೀಸರ ಪ್ರಕಾರ ಅಹ್ಮದೀಯ ಯುವಕನೊಬ್ಬ ಆಕ್ಷೇಪಾರ್ಹವಾದ ವಿಷಯವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕೆ ರಾಜಧಾನಿ ಇಸ್ಲಾಮಾಬಾದಿನ ಆಗ್ನೇಯ ಭಾಗದಿಂದ 220 ಕಿ.ಮೀ (140 ಮೈಲಿ) ದೂರದಲ್ಲಿರುವ  ಗುಜ್ರಾನ್ವಾಲಾ ಪಟ್ಟಣದಲ್ಲಿ ಭಾನುವಾರ  2 ಯುವಕರ ಗುಂಪುಗಳ ನಡುವೆ ನಡುವೆ ವಾಗ್ವಾದ ಪ್ರಾರಂಭವಾಯಿತು .
 
ನಂತರ ಪೋಲಿಸ್ ಠಾಣೆಗೆ ಬಂದ 150 ಸದಸ್ಯರ ತಂಡ ಆರೋಪಿಯ ಮೇಲೆ ಧರ್ಮನಿಂದನೆ ಪ್ರಕರಣವನ್ನು ದಾಖಲಿಸುವಂತೆ ಒತ್ತಾಯಿಸಿದರು.
 
ಪೋಲಿಸರು ಎರಡು ಗುಂಪುಗಳ ನಡುವೆ ಸಂಧಾನ ನಡೆಸಲು ಪ್ರಯತ್ನಿಸುರುವಾಗ, ಅಲ್ಲಿಗೆ ಬಂದ ಇನ್ನೊಂದು ಗುಂಪು ಅಹ್ಮದೀಯರ ಮನೆಗಳನ್ನು ಸುಡಲು ಪ್ರಾರಂಭಿಸಿತು. 
 
ಇಷ್ಟೆಲ್ಲಾ ಅನಾಹುತ ನಡೆದರೂ ಪೋಷ್ಟ್ ಪ್ರಕಟಿಸಿದ ಯುವಕ ಸುರಕ್ಷಿತನಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಪಾಕ್ ಕಾನೂನಿನ ಪ್ರಕಾರ ಅಹ್ಮದೀಯರು ಮುಸ್ಲಿಂ ಗ್ರೀಟಿಂಗ್ಸ್‌ಗಳನ್ನು ಬಳಸುವಂತಿಲ್ಲ, ಮುಸ್ಲಿಂ ಪ್ರಾರ್ಥನೆಗಳು ಹೇಳುವಂತಿಲ್ಲ ಅಥವಾ ಮಸೀದಿಯನ್ನು ಪೂಜಾಸ್ಥಾನವಾಗಿ ಬಳಸುವಂತಿಲ್ಲ. 
 
ಈ ಕುರಿತು ಪ್ರತಿಕ್ರಿಯಿಸಿರುವ ಅಹ್ಮದೀಯ ಸಮುದಾಯದ ವಕ್ತಾರ ಸಲೀಮ್ ಉದ್ ದಿನ್ ಗಲಭೆ ನಡೆಯುವಾಗ ಪೋಲಿಸರು ಸ್ಥಳದಲ್ಲಿದ್ದರು. ಆದರೆ ಅಲ್ಪ ಸಂಖ್ಯಾತರ ಮನೆಗಳನ್ನು ಸುಡುವಾಗ  ಪೋಲಿಸರು ನೋಡುತ್ತಾ ನಿಂತಿದ್ದರು.  ಅದನ್ನು ತಡೆಯಲು ಅವರು ಪ್ರಯತ್ನಿಸಲೇ ಇಲ್ಲ. ಮೊದಲು ಮನೆಗಳನ್ನು ಮತ್ತು ಅಂಗಡಿಗಳನ್ನು ಲೂಟಿ ಮಾಡಿದ ವಿರೋಧಿ ಗುಂಪು ನಂತರ  ಮನೆಗಳನ್ನು ಸುಟ್ಟು ಹಾಕಿತು ಎಂದಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments