Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಸ್ನೇಹಿತ, ಭಾರತ ಆಕ್ರಮಿಸುವ ಶಕ್ತಿ: ಗಿಲಾನಿ

ಪಾಕಿಸ್ತಾನ ಸ್ನೇಹಿತ, ಭಾರತ ಆಕ್ರಮಿಸುವ ಶಕ್ತಿ: ಗಿಲಾನಿ
ಜಮ್ಮು , ಶನಿವಾರ, 10 ಸೆಪ್ಟಂಬರ್ 2016 (16:09 IST)
ಕಾಶ್ಮೀರದ ವಾಸ್ತವಪರಿಸ್ಥಿತಿಯಿಂದ ಗಮನ ಬೇರೆಡೆ ಸೆಳೆಯಲು ಭಾರತ ಮಾತುಕತೆಯ ಪ್ರಹಸನ ಆರಂಭಿಸಿದೆ ಎಂದು ಕಟ್ಟರ್‌ಪಂಥೀಯ ಹುರಿಯತ್ ನಾಯಕ ಸಯ್ಯದ್ ಅಲಿ ಶಹ್ ಗಿಲಾನಿ ಶುಕ್ರವಾರ ತಿಳಿಸಿದರು.

ಪಾಕಿಸ್ತಾನವನ್ನು ಸ್ನೇಹಿತ ಮತ್ತು ಭಾರತವನ್ನು ಆಕ್ರಮಿಸುತ್ತಿರುವ ಶಕ್ತಿ ಎಂದು ಬಣ್ಣಿಸಿದ ಅವರು, ನಮ್ಮ ದೃಢಸಂಕಲ್ಪದಿಂದ ಮತ್ತು ಸ್ವಾತಂತ್ರ್ಯಕ್ಕಾಗಿ ನಮ್ಮ ಐಕ್ಯತೆಯ ಹೋರಾಟದಿಂದ ಅದುರಿದ ಭಾರತ ಭೇಟಿಯ ಪ್ರಹಸನವಾಡುತ್ತಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಗಿಲಾನಿ ತಿಳಿಸಿದರು.

ಶ್ರೀನಗರದಲ್ಲಿರುವ ಅವರ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡುವುದಕ್ಕೆ ಅಧಿಕಾರಿಗಳು ನಿರಾಕರಿಸಿದ ಬಳಿಕ ಸಯ್ಯದ್ ಅಲಿ ಶಹ್ ಹೇಳಿಕೆ ಹೊರಬಿದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
ಅವರು ನಮಗೆ ಏನು ಬೇಕೆಂದು ಕೇಳಲು ಪುನಃ ಬರಲಿದ್ದಾರೆ. ಆ ಪ್ರಶ್ನೆಗೆ ಅವರಿಗೆ ಉತ್ತರ ಗೊತ್ತಿದೆ. ನಮಗೆ ಸ್ವಾತಂತ್ರ್ಯ ಬೇಕಾಗಿದೆ ಎಂದರು. ತಮಗೆ ಬೆಂಬಲಿಸಿದ ಪಾಕ್‌ಗೆ ಅಭಿನಂದಿಸಿದ ಅವರು, ಈ ಬಂಡಾಯದ ಸಂದರ್ಭದಲ್ಲಿ ಪಾಕಿಸ್ತಾನವು ನಮ್ಮ ಸ್ನೇಹಿತರೆಂದು, ಹಿತಚಿಂತಕರೆಂದು ಮತ್ತೊಮ್ಮೆ ಸಾಬೀತು ಮಾಡಿದೆ. ಪಾಕಿಸ್ತಾನ ಮತ್ತು ಜನತೆ ನಮ್ಮ ನೋವನ್ನು ಹಂಚಿಕೊಂಡು ನಮ್ಮ ಬೆಂಬಲಕ್ಕೆ ಧ್ವನಿ ಎತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ಸ್ಥಾನಮಾನದ ಬದಲು ಆಂಧ್ರಕ್ಕೆ ಹಳಸಿದ ಲಡ್ಡುಗಳು: ಪವನ್ ಕಲ್ಯಾಣ್