Select Your Language

Notifications

webdunia
webdunia
webdunia
webdunia

ಕಾಶ್ಮಿರದಲ್ಲಿ ಹಿಂಸಾಚಾರ ಹೆಚ್ಚಿಸಲು 100 ಕೋಟಿ ಹವಾಲಾ ಹಣ ರವಾನೆ: ಗುಪ್ತಚರ ದಳ

ಕಾಶ್ಮಿರದಲ್ಲಿ ಹಿಂಸಾಚಾರ ಹೆಚ್ಚಿಸಲು 100 ಕೋಟಿ ಹವಾಲಾ ಹಣ ರವಾನೆ: ಗುಪ್ತಚರ ದಳ
ಕಾಶ್ಮಿರ್: , ಗುರುವಾರ, 14 ಜುಲೈ 2016 (18:48 IST)
ಜಮ್ಮು ಕಾಶ್ಮಿರದಲ್ಲಿ ಹಿಂಸಾಚಾರ ಹೆಚ್ಚಿಸಲು ಪ್ರತ್ಯೇಕತಾವಾದಿ ಗುಂಪುಗಳಿಗೆ ಪಾಕಿಸ್ತಾನ ಹವಾಲಾ ಮುಖಾಂತರ 100 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ರವಾನಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
 
ಹಿಜ್ಬುಲ್ ಸಂಘಟನೆಯ ಉಗ್ರ ಬುರ್ಹಾನ್ ವನಿ ಹತ್ಯೆಯ ನಂತರ ನಡೆದ ಘರ್ಷಣೆಯಲ್ಲಿ 35 ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದು 1400 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. 
 
ಕಳೆದ ವಾರ, ಕಿಡಿಗೇಡಿಗಳ ಗುಂಪು ಕುಲ್ಗಾಮ್‌ನ ದಮಹಲ್ ಹಾಂಜಿ ಪೋರಾ ಪ್ರದೇಶದಲ್ಲಿರುವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಲ್ಲದೇ 70 ಸ್ವಯಂಚಾಲಿತ ಗನ್‌ಗಳನ್ನು ಎತ್ತಿಕೊಂಡು ಪರಾರಿಯಾಗಿತ್ತು. ಪೊಲೀಸರಿಂದ ಕಸಿದುಕೊಂಡ ಶಸ್ತ್ರಾಸ್ತ್ರಗಳು ಕೊನೆಗೂ ಉಗ್ರರಿಗೆ ತಲುಪುತ್ತವೆ ಎಂದು ಸೇನಾ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
 
ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಟಿಸಲು ಪಾಕಿಸ್ತಾನ ಪ್ರತಿ ವರ್ಷ 100 ಕೋಟಿ ರೂಪಾಯಿಗಳನ್ನು ಹವಾಲಾ ಮುಖಾಂತರ ಜಮ್ಮು ಕಾಶ್ಮಿರಕ್ಕೆ ರವಾನಿಸುತ್ತದೆ. 
 
ಪಾಕಿಸ್ತಾನದಿಂದ ಪ್ರತ್ಯೇಕತಾವಾದಿಗಳಿಗೆ ನೇರವಾಗಿ ಹಣ ತಲುಪುತ್ತದೆ. ಪ್ರತ್ಯೇಕತಾವಾದಿಗಳು ಭದ್ರತಾ ಪಡೆಗಳ ವಿರುದ್ಧ ಹೋರಾಡುವವರಿಗೆ ಹಣವನ್ನು ನೀಡುತ್ತದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. 
 
ಕೆಲ ಗುಪ್ತಚರ ಮೂಲಗಳ ಪ್ರಕಾರ, ತರಬೇತಿ ಪಡೆದ ಉಗ್ರರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸ್ ಮತ್ತು ಸೇನಾಪಡೆಗಳ ವಿರುದ್ಧ ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಂ.ಕೆ.ಗಣಪತಿಗೆ ಕಿರುಕುಳ ನೀಡಿಲ್ಲ: ಎ.ಎಂ.ಪ್ರಸಾದ್ ಸ್ಪಷ್ಟನೆ