Select Your Language

Notifications

webdunia
webdunia
webdunia
webdunia

ಅನುಪಮ್ ಖೇರ್‌ಗೆ ವೀಸಾ ನಿರಾಕರಿಸಿದ ಪಾಕ್!

ಅನುಪಮ್ ಖೇರ್‌ಗೆ ವೀಸಾ ನಿರಾಕರಿಸಿದ ಪಾಕ್!
ಮುಂಬೈ , ಮಂಗಳವಾರ, 2 ಫೆಬ್ರವರಿ 2016 (13:23 IST)
ಇತ್ತೀಚಿಗಷ್ಟೆ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಪ್ರಖ್ಯಾತ ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರಿಗೆ ಪಾಕಿಸ್ತಾನ ವೀಸಾ ನಿರಾಕರಿಸಿದೆ.

ಫೆಬ್ರವರಿ 5ರಂದು ಕರಾಚಿ ಸಾಹಿತ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಖೇರ್ ಅವರನ್ನು ಆಮಂತ್ರಿಸಲಾಗಿತ್ತು. ಖೇರ್ ಅವರು ಸೇರಿದಂತೆ ಒಟ್ಟು 18 ಜನರು ಈ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲೆಂದು ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. 18 ಮಂದಿಯ ಪೈಕಿ 17 ಮಂದಿಗೆ ವೀಸಾ ನೀಡಲಾಗಿದ್ದು ತಮಗಷ್ಟೆ ವೀಸಾ ನೀಡಿಲ್ಲ ಎಂದು ಅನುಪಮ್ ಖೇರ್ ನಿರಾಶೆ ವ್ಯಕ್ತ ಪಡಿಸಿದ್ದಾರೆ.
ಆದರೆ ಖೇರ್ ಅವರ ಆರೋಪವನ್ನು ನಿರಾಕರಿಸಿರುವ ಪಾಕಿಸ್ತಾನ ಹೈ ಕಮಿಷನರ್ ನಟ ವೀಸಾಗಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ, ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
 
60 ಹರೆಯದ ಹಿರಿಯ ನಟ ಕೇಂದ್ರದಲ್ಲಿ ಆಳ್ವಿಕೆಯಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಬೆಂಬಲಿಗರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada