Select Your Language

Notifications

webdunia
webdunia
webdunia
webdunia

ಮುಂಬೈನ ನೂತನ ಪೊಲೀಸ್ ಆಯುಕ್ತರಾಗಿ ದತ್ತಾತ್ರೇಯ ಪಡಸಲಗಿಕರ್

ಮುಂಬೈನ ನೂತನ ಪೊಲೀಸ್ ಆಯುಕ್ತರಾಗಿ ದತ್ತಾತ್ರೇಯ ಪಡಸಲಗಿಕರ್
ಮುಂಬೈ , ಶನಿವಾರ, 30 ಜನವರಿ 2016 (19:29 IST)
ಮಹಾರಾಷ್ಟ್ರ ಸರಕಾರ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ದತ್ತಾತ್ರೇಯ್ ಪಡಸಲಗಿಕರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
 
ನಾಳೆ ನಿವೃತ್ತಿಯಾಗಿ ಸೌದಿ ಅರೇಬಿಯಾದಲ್ಲಿ ಭಾರತದ ರಾಯಭಾರಿಯಾಗಿ ನೇಮಕಗೊಳ್ಳಲಿರುವ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಅಹ್ಮದ್ ಜಾವೇದ್ ಅವರಿಂದ 1982ರ ಐಪಿಎಸ್ ಬ್ಯಾಚ್ ಅಧಿಕಾರಿಯಾದ ಪಡಸಲಗಿಕರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
 
ಪೊಲೀಸ್ ಆಯುಕ್ತರ ಹುದ್ದೆಯನ್ನು ಮುಂದಿನ ಆದೇಶದವರೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಕೇಶ್ ಮಾರಿಯಾ ಅವರಿಂದ ಅಧಿಕಾರ ಸ್ವೀಕರಿಸಿದ್ದ ಜಾವೇದ್, ಅಧಿಕಾರ ಸ್ವಿಕರಿಸುವ ಮುನ್ನ ಹೋಮ್‌ಗಾರ್ಡ್ ಡಿಜಿಯಾಗಿ ಸೇವೆ ಸಲ್ಲಿಸಿದ್ದರು. 
 
ಕಳೆದ ಕೆಲ ವರ್ಷಗಳಿಂದ ಇಂಟವಿಜೆನ್ಸ್ ಬ್ಯೂರೋದಲ್ಲಿ ಸೇವೆ ಸಲ್ಲಿಸಿರುವ ಪಡಸಲಗಿಕರ್, ಆಗಸ್ಟ್ 2018 ರಲ್ಲಿ ನಿವೃತ್ತಿಯಾಗಲಿದ್ದಾರೆ.

Share this Story:

Follow Webdunia kannada