Select Your Language

Notifications

webdunia
webdunia
webdunia
webdunia

ಶಿಷ್ಯವೇತನ ಹೆಚ್ಚಳಕ್ಕೆ ಒತ್ತಾಯಿಸಿ 4 ಸಾವಿರ ನಿವಾಸಿ ವೈದ್ಯರ ಅನಿರ್ಧಿಷ್ಠಾವಧಿ ಮುಷ್ಕರ

ಶಿಷ್ಯವೇತನ ಹೆಚ್ಚಳಕ್ಕೆ ಒತ್ತಾಯಿಸಿ 4 ಸಾವಿರ ನಿವಾಸಿ ವೈದ್ಯರ ಅನಿರ್ಧಿಷ್ಠಾವಧಿ ಮುಷ್ಕರ
ಮುಂಬೈ: , ಗುರುವಾರ, 2 ಜುಲೈ 2015 (16:59 IST)
ಶಿಷ್ಯವೇತನ ಹೆಚ್ಚಳಕ್ಕೆ ಒತ್ತಾಯಿಸಿ ವೈದ್ಯರು ಮತ್ತು ಸರಕಾರದ ಮಧ್ಯೆ ನಡೆದ ಸಂಧಾನ ವಿಫಲವಾಗಿದ್ದರಿಂದ, ರಾಜ್ಯದಲ್ಲಿರುವ 4 ಸಾವಿರ ನಿವಾಸಿ ವೈದ್ಯರು ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. 
 
ಮುಂಬೈ ನಗರವೊಂದರಲ್ಲಿಯೇ ಅಂದಾಜು 2 ಸಾವಿರ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವೈದ್ಯ ಸಂಘಟನೆಗಳು ಮಾಹಿತಿ ನೀಡಿವೆ.
 
ಮಹಾರಾಷ್ಟ್ರ ಅನಿವಾಸಿ ವೈದ್ಯರ ಸಂಘದ ಅಧ್ಯಕ್ಷರಾದ ಸಾಗರ್ ಮುಂದಾಡಾ ಮಾತನಾಡಿ ಶಿಷ್ಯವೇತನ ಹೆಚ್ಚಳ ವೈದ್ಯರ ರಕ್ಷಣಾ ಕಾಯ್ದೆ ಜಾರಿ, ಮಹಿಳಾ ವೈದ್ಯರಿಗೆ ಎರಡು ತಿಂಗಳ ಹೆರಿಗೆ ರಜೆ ಮತ್ತು ನಿಗದಿತ ಕರ್ತವ್ಯದ ಅವಧಿ ಸೇರಿದಂತೆ ಇತರ ವಿಷಯಗಳಿವೆ. ಸರಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
 
ಟಿಬಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅನಾರೋಗ್ಯಕ್ಕೆ ಒಳಗಾದಲ್ಲಿ ಆರು ತಿಂಗಳಗಳ ಕಾಲ ರಜೆ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ. 
 
ಎಂಡಿ ಪದವಿಯನ್ನು ಪೂರ್ಣಗೊಳಿಸಿದ ಒಂದು ತಿಂಗಳ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ (ಕಡ್ಡಾಯ ಸೇವೆ) ಉದ್ಯೋಗವಕಾಶ ದೊರೆಯದಿದ್ದಲ್ಲಿ ವೈದ್ಯರಿಗೆ ನಗರಗಳಲ್ಲಿ ಉದ್ಯೋಗಕ್ಕೆ ಸೇರಲು ಸರಕಾರ ಅಡ್ಡಿಪಡಿಸಬಾರದು ಎಂದು ವೈದ್ಯರ ಸಂಘಧ ಅಧ್ಯಕ್ಷ ಸಾಗರ್ ಮುಂದಾಡಾ ಒತ್ತಾಯಿಸಿದ್ದಾರೆ.  
 

Share this Story:

Follow Webdunia kannada