Select Your Language

Notifications

webdunia
webdunia
webdunia
webdunia

ಕಳೆದ 3 ವರ್ಷಧಲ್ಲಿ 24 ಸಾವಿರ ವರದಕ್ಷಿಣೆ ಕಿರುಕುಳ ಸಾವು: ಮೇನಕಾ ಗಾಂಧಿ

ಕಳೆದ 3 ವರ್ಷಧಲ್ಲಿ 24 ಸಾವಿರ ವರದಕ್ಷಿಣೆ ಕಿರುಕುಳ ಸಾವು: ಮೇನಕಾ ಗಾಂಧಿ
ನವದೆಹಲಿ , ಶುಕ್ರವಾರ, 31 ಜುಲೈ 2015 (19:33 IST)
ಕಳೆದ ಮೂರು ವರ್ಷಗಳ ಅವಧಿಯಲ್ಲಿ 24771 ವರದಕ್ಷಿಣೆ ಕಿರುಕುಳ ಸಾವುಗಳು ಸಂಭವಿಸಿವೆ. ಅದರಲ್ಲಿ 7048 ವರದಕ್ಷಿಣೆ ಕಿರುಕುಳ ಸಾವುಗಳು ಉತ್ತರಪ್ರದೇಶದಲ್ಲಿ ಸಂಭವಿಸಿವೆ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
 
ಲೋಕಸಭೆಯಲ್ಲಿ ಲಿಕಿತ ಉತ್ತರ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೇನಕಾ ಗಾಂಧಿ, 2012ರಲ್ಲಿ (8233), 2013ರಲ್ಲಿ (8083) ಮತ್ತು 2014ರಲ್ಲಿ (8455) ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ಭಾರತದ ಸಂವಿಧಾನದ ಅನ್ವಯ 304 ಬಿ ಅಡಿಯಲ್ಲಿ ದಾಖಲಿಸಲಾಗಿದೆ ಎಂದರು.
 
ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ವರದಕ್ಷಿಣೆ ಕಿರುಕುಳ ಸಾವುಗಳು ಸಂಭವಿಸಿದ್ದು, ನಂತರದ ಸ್ಥಾನವನ್ನು ಬಿಹಾರ್(3830) ಮತ್ತು ಮಧ್ಯಪ್ರದೇಶ(2252) ಹೊಂದಿವೆ ಎಂದು ತಿಳಿಸಿದ್ದಾರೆ.
 
ನ್ಯಾಷನಲ್ ಕ್ರೈಮ್ ರಿಕಾರ್ಡ್ಸ್ ಬ್ಯೂರೋ ಅಂಕಿ ಅಂಶಗಳ ಪ್ರಕಾರ, 3.48 ಲಕ್ಷ ಪ್ರಕರಣಗಳು ಪತಿ ಮತ್ತು ಆತನ ಸಲಂಬಂಧಿಕರಿಂದ ನಡೆದಿದ್ದು ಪಶ್ಚಿಮ ಬಂಗಾಳ(61259) ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ರಾಜಸ್ಥಾನ(44311) ಮತ್ತು ಆಂಧ್ರದಲ್ಲಿ (34,835) ಪ್ರಕರಣಗಳು ದಾಖಲಾಗಿವೆ.  
 
ವರದಕ್ಷಿಣೆ ನಿಷೇಧ, ಮಹಿಳಾ ದೌರ್ಜನ್ಯ ಕುರಿತಂತೆ ಜನತೆಗೆ ಅರಿವು ಮೂಡಿಸಲು ಜಾಗೃತಿ ಜಾಥಾ ಸೇರಿದಂತೆ ಅನೇಕ ಸಾಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೇನಕಾ ಗಾಂದಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
 

Share this Story:

Follow Webdunia kannada