Select Your Language

Notifications

webdunia
webdunia
webdunia
webdunia

ಪರಮಾಣು ಒಪ್ಪಂದ ಕಾಂಗ್ರೆಸ್‌ನದ್ದು, ಬಿಜೆಪಿಯದ್ದಲ್ಲ ಎಂದು ಒಬಾಮಾಗೆ ಮಾಹಿತಿ ನೀಡಿದ ಕಾಂಗ್ರೆಸ್

ಪರಮಾಣು ಒಪ್ಪಂದ ಕಾಂಗ್ರೆಸ್‌ನದ್ದು, ಬಿಜೆಪಿಯದ್ದಲ್ಲ ಎಂದು ಒಬಾಮಾಗೆ ಮಾಹಿತಿ ನೀಡಿದ ಕಾಂಗ್ರೆಸ್
ನವದೆಹಲಿ , ಮಂಗಳವಾರ, 27 ಜನವರಿ 2015 (17:50 IST)
ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಬಂದು ಹಿಂತಿರುಗಿದ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಸ್ವಲ್ಪಸಮಯ ಮಾಡಿಕೊಂಡು ಪೂರ್ವ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾದರು.
 
ಯುಪಿಎ ಅಧಿಕಾರಾವಧಿಯಲ್ಲಿ ನಡೆದಿದ್ದ ನಾಗರಿಕ ಪರಮಾಣು ಒಪ್ಪಂದವನ್ನು ಕಾರ್ಯರೂಪಕ್ಕೆ ತರುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. 
 
ಬರಾಕ್ ಒಬಾಮಾ ಭೇಟಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಮಾಜಿ ವಾಣಿಜ್ಯ ಸಚಿವ ಆನಂದ ಶರ್ಮಾ ನಿಯೋಗ, ಮೋದಿ ಸರಕಾರ ಒಂದು ವೇಳೆ ನಾಗರಿಕ ಪರಮಾಣು ಒಪ್ಪಂದವನ್ನು ತಿರುಚಿದಲ್ಲಿ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
 
ಉಭಯ ದೇಶಗಳ ಮಧ್ಯೆ ಯಾವ ರೀತಿ ಸಹಕಾರ ಒಪ್ಪಂದಗಳು ಮೋದಿ ಮತ್ತು ಒಬಾಮಾ ಅವರ ಮಧ್ಯೆ ನಡೆದಿದೆ ಎನ್ನುವ ಬಗ್ಗೆ ಒಬಾಮಾ ಅವರಿಂದ ಯಾವುದೇ ಮಾಹಿತಿ ಪಡದಿಲ್ಲ. ಉಭಯ ದೇಶಗಳ ನಡುವೆ ಉತ್ತಮ ಸಹಕಾರವಿರಲಿ ಎನ್ನುವುದೇ ನಮ್ಮ ಬಯಕೆ. ಮುಂಬರುವ ದಿನಗಳಲ್ಲಿ ಒಬಾಮಾ ಭೇಟಿಯ ಸಂಪೂರ್ಣ ಮಾಹಿತಿಗಳು ಲಭ್ಯವಾಗಲಿವೆ ಎಂದು ಸೋನಿಯಾ ನೇತೃತ್ವದ ನಿಯೋಗ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
 
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಒಬಾಮಾರ ಬಳಿ ಪರಮಾಣು ಒಪ್ಪಂದವನ್ನು ಕಾರ್ಯಗತ ಮಾಡಲು ಹೊರಟಾಗ ಇದೇ ಎನ್‌ಡಿಎ ಸರಕಾರ ದೇಶಾದ್ಯಂತ ತೀವ್ರವಾಗಿ ಪ್ರತಿಭಟಿಸಿತ್ತು. ಪರಮಾಣು ಒಪ್ಪಂದದ ಬಗ್ಗೆ ವಿಪಕ್ಷಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಪ್ರತಿಭಟನೆ ನಡೆಸಿದ್ದವು. ಇದೀಗ, ಮೋದಿ ನೇತೃತ್ವದ ಸರಕಾರ ಕಾಂಗ್ರೆಸ್ ನೀತಿಯನ್ನು ಪಾಲಿಸುತ್ತಿದ್ದಾರೆ ಎಂದು ಸೋನಿಯಾ ನಿಯೋಗ ಲೇವಡಿ ಮಾಡಿದೆ. 

Share this Story:

Follow Webdunia kannada