Webdunia - Bharat's app for daily news and videos

Install App

ಒಆರ್‌ಒಪಿ ಯೋಧನ ಆತ್ಮಹತ್ಯೆ: ಮೋದಿಯಿಂದ ಸರ್ವಾಧಿಕಾರಿ ಧೋರಣೆ ಎಂದ ರಾಹುಲ್

Webdunia
ಬುಧವಾರ, 2 ನವೆಂಬರ್ 2016 (15:46 IST)
ಒನ್ ರ್ಯಾಂಕ್ ಒನ್ ಪೆನ್ಶನ್ ಕುರಿತಂತೆ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ ರಾಮ್ ಕಿಶನ್ ಗರೇವಾಲ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಆರ್‌ಎಂಎಲ್ ಆಸ್ಪತ್ರೆಗೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಅಧಿಕಾರಿಗಳು ಭೇಟಿಯಾಗದಂತೆ ತಡೆಯೊಡ್ಡಿದ ಘಟನೆ ವರದಿಯಾಗಿದೆ.  
 
ರಾಹುಲ್ ಗಾಂಧಿ, ಆಸ್ಪತ್ರೆಯ ಒಂದು ದ್ವಾರದಿಂದ ಮತ್ತೊಂದು ದ್ವಾರಕ್ಕೆ ತೆರಳಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯೊಳಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುವುದು ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
 
ಆಸ್ಪತ್ರೆ ಒಳಗಡೆ ಬಿಡದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಮೋದಿ ಸರಕಾರ ದೇಶದಲ್ಲಿ ಎಂತಹ ವಾತಾವರಣ ಸೃಷ್ಟಿಸಿದೆ. ದೇಶದ ಇತಿಹಾಸದಲ್ಲಿಯೇ ನಮ್ಮ ಸೈನಿಕರ ಕುಟುಂಬಗಳನ್ನು ಭೇಟಿ ಮಾಡಲು ನಮಗೇ ಅವಕಾಶ ಕೊಡುತ್ತಿಲ್ಲ ಎಂದು ಗುಡುಗಿದರು.
 
ಆಸ್ಪತ್ರೆಯ ಪರಿಸ್ಥಿತಿ ಕುರಿತಂತೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಇದೊಂದು ಮೋದಿ ಸರಕಾರದ ಮಾನಸಿಕ ಅಸ್ವಸ್ಥತೆ ಮತ್ತು ಪ್ರಜಾಪ್ರಭುತ್ವದ ಮಾನಸಿಕ ಅಸ್ವಸ್ಥತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
 
ನನಗೆ ಆಸ್ಪತ್ರೆಯೊಳಗೆ ಪ್ರವೇಶಿಸಲು ಅನುಮತಿ ನೀಡದಿದ್ದರೂ ಪರವಾಗಿಲ್ಲ. ಯೋಧನ ಕುಟುಂಬದವರು ನನ್ನನ್ನು ಹೊರಗಡೆ ಭೇಟಿ ಮಾಡಲು ಅನುಮತಿ ಕೋರಿದರು. ಆದರೆ, ರಾಹುಲ್ ಭೇಟಿಗೆ ಬಂದ ಮೃತ ಯೋಧನ ಕುಟುಂಬದವರನ್ನು ಅಧಿಕಾರಿಗಳು ತಡೆದರು ಎನ್ನಲಾಗಿದೆ.
 
ಹುತಾತ್ಮ ಯೋಧನ ಕುಟುಂಬದವರನ್ನು ಬಂಧಿಸಲಾಗಿದೆ. ಮೋದಿ ಸರಕಾರ ಲಜ್ಜಗೇಡಿ ಸರಕಾರವಾಗಿದೆ ಎಂದು ಕಿಡಿಕಾರಿ ರಾಹುಲ್ ಗಾಂಧಿ ಆಸ್ಪತ್ರೆಯಿಂದ ತೆರಳಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
 
ಇದಕ್ಕಿಂತ ಮೊದಲು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಯೋಧನ ಕುಟುಂಬದವರನ್ನು ಭೇಟಿ ಮಾಡಲು ತೆರಳಿದ್ದಾಗ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments