Select Your Language

Notifications

webdunia
webdunia
webdunia
webdunia

ಗೋಡ್ಸೆಯನ್ನು ಹಿಡಿದ ವ್ಯಕ್ತಿಯ ಪತ್ನಿಗೆ ಒಡಿಶಾ ಸರ್ಕಾರದಿಂದ 5 ಲಕ್ಷ ರೂ. ನೆರವು

ಗೋಡ್ಸೆಯನ್ನು ಹಿಡಿದ ವ್ಯಕ್ತಿಯ ಪತ್ನಿಗೆ ಒಡಿಶಾ ಸರ್ಕಾರದಿಂದ 5 ಲಕ್ಷ ರೂ. ನೆರವು
ಭುವನೇಶ್ವರ: , ಗುರುವಾರ, 12 ಮೇ 2016 (13:45 IST)
ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಸೆರೆಹಿಡಿಯುವಲ್ಲಿ ಅಪಾರ ಶೌರ್ಯ ತೋರಿದ್ದ ರಘು ನಾಯಕ್ ಮೃತಪಟ್ಟು 33 ವರ್ಷಗಳ ಬಳಿಕ ಒಡಿಶಾ ಸರ್ಕಾರ ಅವರ ವಿಧವೆ ಪತ್ನಿಗೆ 5 ಲಕ್ಷ ರೂ. ನೆರವಿನ ಹಸ್ತ ಚಾಚಿದೆ. 
 
ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಮಂಡೋದರಿ ನಾಯಕ್ ಅವರಿಗೆ ಚೆಕ್ ಹಸ್ತಾಂತರಿಸಿದ್ದು, ಇಲ್ಲಿನ ಸಚಿವಾಲಯದಲ್ಲಿ ಶಾಲೊಂದನ್ನು ಹಾಕಿ ಸನ್ಮಾನಿಸಿದರು. 
 
ಕೇಂದ್ರಪಾರಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಕುಟುಂಬದ ಸದಸ್ಯರು ಅವರನ್ನು ಜತೆಗೂಡಿದ್ದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಾಯಕ್ ಪತ್ನಿಗೆ ಹಣಕಾಸು ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಘುನಾಯಕ್ ಅವರು ಗೋಡ್ಸೆಯನ್ನು ಹಿಡಿದ ಅಸಾಮಾನ್ಯ ವೀರತನಕ್ಕಾಗಿ ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ 500 ರೂ. ಬಹುಮಾನ ನೀಡಿದ್ದರು. 
 
ನಾಯಕ್ ಪತ್ನಿ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಅವರಿಗೆ ನೆರವು ನೀಡಲು ಮುಖ್ಯಮಂತ್ರಿ ಕಚೇರಿ ನಿರ್ಧರಿಸಿತು. ನಾಯಕ್ 1983ರಲ್ಲಿ ಮೃತಪಟ್ಟ ಕೆಲವೇ ವರ್ಷಗಳಲ್ಲಿ ಅವರ ಪುತ್ರ ಕೂಡ ಸತ್ತಿದ್ದರು. ಮಂಡೋದರಿ ಈಗ ಪುತ್ರಿಯ ಜತೆ ವಾಸವಿದ್ದಾರೆ. ರಘುನಾಯಕ್ ದೆಹಲಿಯ ಬಿರ್ಲಾ ಹೌಸ್‌ನಲ್ಲಿ ತೋಟದ ತೋಟದ ಕೆಲಸ ಮಾಡುತ್ತಿದ್ದು ಗೋಡ್ಸೆ ಗಾಂಧೀಜಿ ಮೇಲೆ ಗುಂಡು ಹಾರಿಸಿದ ಕೂಡಲೇ ಗೋಡ್ಸೆಯನ್ನು ಬೆನ್ನಟ್ಟಿ ಅವನನ್ನು ಹಿಡಿದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

11ರ ಬಾಲಕಿಯಿಂದ 71 ವರ್ಷದ ವೃದ್ಧೆ ಹತ್ಯೆ ಯತ್ನ