ನವದೆಹಲಿ : ಕೃಷಿ ಕಾಯ್ದೆಯನ್ನು ಶ್ಲಾಘಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣಕ್ಕೆ ವಿಪಕ್ಷಗಳು ಬಹಿಷ್ಕಾರ ಹಾಕಿದ್ದಾರೆ.
ಕಲಾಪದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಲಾಪವನ್ನುದ್ದೇಶಿಸಿ ಮಾತನಾಡಿದ್ದು, ರೈತರ ನೆರವಿಗಾಗಿ, ಕೃಷಿಯ ಸಶಕ್ತಿಕರಣಕ್ಕಾಗಿ 3 ಕೃಷಿ ಕಾಯ್ದೆ ಜಾರಿ ಮಾಡಲಾಗಿದೆ. ಕೃಷಿ ಸುದಾರಣೆ, ಸಣ್ಣ ರೈತರಿಗಾಗಿ ಕಾಯ್ದೆ ಜಾರಿ. ಹಳೆ ವ್ಯವಸ್ಥೆ ರೈತರ ಜೀವ ತಿನ್ನುತ್ತಿತ್ತು. ಹೊಸ ಕಾಯ್ದೆಗಳಿಂದ ರೈತರಿಗೆ ಶಕ್ತಿ ಬಂದಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಆದರೆ ಕೃಷಿ ಕಾಯ್ದೆಯನ್ನು ಶ್ಲಾಘಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ಕಾಂಗ್ರೆಸ್, ಟಿಎಂಸಿ, ಶಿವಸೇನೆ, ಎನ್ ಸಿಪಿ, ಆಪ್ ಸೇರಿ 18 ಪಕ್ಷಗಳು ಬಹಿಷ್ಕಾರ ಹಾಕಿದ್ದಾರೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ.