Select Your Language

Notifications

webdunia
webdunia
webdunia
webdunia

ಮಮತಾ ಬ್ಯಾನರ್ಜಿ ಅವಧಿಯಲ್ಲಿ ಬಾಂಬ್ ಫ್ಯಾಕ್ಟರಿಗಳ ನಿರ್ಮಾಣ: ಅಮಿತ್ ಶಾ ಲೇವಡಿ

ಮಮತಾ ಬ್ಯಾನರ್ಜಿ ಅವಧಿಯಲ್ಲಿ ಬಾಂಬ್ ಫ್ಯಾಕ್ಟರಿಗಳ ನಿರ್ಮಾಣ: ಅಮಿತ್ ಶಾ ಲೇವಡಿ
ಕೋಲ್ಕತಾ , ಮಂಗಳವಾರ, 29 ಮಾರ್ಚ್ 2016 (15:39 IST)
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಅಧಿಕಾರವಧಿಯಲ್ಲಿ ಕೇವಲ ಬಾಂಬ್‌ ಫ್ಯಾಕ್ಟರಿಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
 
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿರುವ ಅಮಿತ್ ಶಾ, ರಾಜ್ಯದಲ್ಲಿ ಕೇವಲ ಬಾಂಬ್‌ ಫ್ಯಾಕ್ಟರಿಗಳನ್ನು ನಿರ್ಮಿಸಲಾಗಿದೆ. ಅವುಗಳು ಕೈಗಾರಿಕೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
ಬಿಜೆಪಿ ಪಕ್ಷ ಎಡಪಕ್ಷಗಳೊಂದಿಗಾಗಲಿ ಅಥವಾ ತೃಣಮೂಲ ಕಾಂಗ್ರೆಸ್ ಪಕ್ಷದೊಂದಿಗಾಗಲಿ ಯಾವತ್ತೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
 
ನಾವು ವಲಸಿಗರಿಗೆ ಆಶ್ರಯ, ಭ್ರಷ್ಟಾಚಾರ ಮತ್ತು ಆತಂಕದ ಪರವಾಗಿಲ್ಲವಾದ್ದರಿಂದ ಕಮ್ಯೂನಿಷ್ಠ‌ದೊಂದಿಗಾಗಲಿ ಅಥವಾ ಮಮತಾ ದೀದಿಯೊಂದಿಗಾಗಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು. 
 
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಎಡಪಕ್ಷಗಳು-ಕಾಂಗ್ರೆಸ್ ಮೈತ್ರಿಕೂಟ ಮತ್ತು ಬಿಜೆಪಿ ಸೇರಿದಂತೆ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆರು ಹಂತದ ಚುನಾವಣೆಗಳು ನಡೆಯಲಿವೆ.

Share this Story:

Follow Webdunia kannada