Webdunia - Bharat's app for daily news and videos

Install App

ಪತ್ನಿಯ ಮೂಗು ಕಚ್ಚಿದ ಪತಿ ಮಹಾಶಯನಿಗೆ ಒಂದು ವರ್ಷ ಜೈಲು ಶಿಕ್ಷೆ

Webdunia
ಬುಧವಾರ, 6 ಮೇ 2015 (16:38 IST)
ಮದ್ಯದ ಅಮಲಿನಲ್ಲಿದ್ದ ಪತಿ ಮಹಾಶಯ ಜಗಳವಾಡುವ ಸಂದರ್ಭದಲ್ಲಿ ಪತ್ನಿಯ ಮೂಗು ಕಚ್ಚಿದ್ದ ಆರೋಪದ ಹಿನ್ನೆಲೆಯಲ್ಲಿ ಪತಿಗೆ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪತ್ನಿಯ ಹೇಳಿಕೆ ಮತ್ತು ವೈದ್ಯಕೀಯ ವರದಿಗಳ ಆಧಾರದಿಂದಾಗಿ ಆರೋಪಿ ಪತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಸ್ಥಳೀಯ ನ್ಯಾಯಾಲಯ ನೀಡಿದ ಒಂದು ವರ್ಷದ ಜೈಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎನ್ನುವ ಆರೋಪಿ ಮಹೇಶ್ ಸಿಂಗ್ ಅರ್ಜಿಯನ್ನು ನ್ಯಾಯಾಲಯ ವಜಾಗಳಿಸಿದೆ.

ಆರೋಪಿ ಕುಡಿದ ಮತ್ತಿನಲ್ಲಿರುವ ಕುರಿತಂತೆ ವೈದ್ಯರು ನೀಡಿದ ವರದಿ ಹಾಗೂ ಮಹಿಳೆಯ ದೂರನ್ನು ಆಧರಿಸಿ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪಿನಲ್ಲಿ ನ್ಯಾಯಮೂರ್ತಿಗಳ ಪಕ್ಷಪಾತ ಧೋರಣೆ ಕಂಡು ಬಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು.

ಕಳೆದ 2011ರ ಮೇ 15 ರಂದು ಮದ್ಯದ ಅಮಲಿನಲ್ಲಿದ್ದ ಪತಿ, ಪತ್ನಿಯೊಂದಿಗೆ ಜಗಳವಾಡಿ ಕೋಪದ ಭರದಲ್ಲಿ ಆಕೆಯ ಮೂಗು ಕಚ್ಚಿ ಗಾಯಗೊಳಿಸಿದ್ದನು.

ಆರೋಪಿ ಮಹೇಶ್ ಸಿಂಗ್‌ಗೆ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 1 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments