Select Your Language

Notifications

webdunia
webdunia
webdunia
webdunia

ಪುಣ್ಯ ಭೂಮಿಯಾದ ಭಾರತದಲ್ಲಿ ಪ್ರತಿ 30 ನಿಮಿಷಕ್ಕೆ ಒಂದು ಅತ್ಯಾಚಾರ

ಪುಣ್ಯ ಭೂಮಿಯಾದ ಭಾರತದಲ್ಲಿ ಪ್ರತಿ 30 ನಿಮಿಷಕ್ಕೆ ಒಂದು ಅತ್ಯಾಚಾರ
ನವದೆಹಲಿ , ಸೋಮವಾರ, 28 ಜುಲೈ 2014 (15:23 IST)
ದೇಶದಲ್ಲಿ ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಎಲ್ಲೆ ಮೀರಿ ಹೆಚ್ಚುತ್ತಿದ್ದು,  13 ವರ್ಷಗಳ ಅಪರಾಧ ವಿಶ್ಲೇಷಣಾ  ಡಾಟಾವೊಂದು ಭಾರತದಲ್ಲಿ ಪ್ರತಿದಿನ ಹೆಚ್ಚು ಕಡಿಮೆ  57 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತವೆ ಎಂಬ ಭೀಕರ ಸತ್ಯವನ್ನು ಅನಾವರಣಗೊಳಿಸಿದೆ. ಇದರ ಪ್ರಕಾರ  ಕಳೆದ 13 ವರ್ಷಗಳಿಂದ ದೇಶದಲ್ಲಿ ಪ್ರತಿ ಗಂಟೆಗೆ 2 ಅತ್ಯಾಚಾರಗಳು ನಡೆಯಲ್ಪಿಟ್ಟಿದ್ದು, 2,72,844 ಪ್ರಕರಣಗಳು ದಾಖಲಾಗಿವೆ. 

ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ ವಿಷ್ಲೇಷಣೆ ಮಾಡಿದ ವರದಿಯ ಪ್ರಕಾರ ದೇಶದ 28 ರಾಜ್ಯಗಳನ್ನು ಪರಿಗಣಿಸಿದರೆ 2001 ರಿಂದ 2013ರ ಅವಧಿಯಲ್ಲಿ 2,64,130 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಪ್ರತಿದಿನವೊಂದಕ್ಕೆ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಪ್ರತಿಶತ 56. ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿನಕ್ಕೆ ಸರಾಸರಿ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಕೇವಲ ದೆಹಲಿಯೊಂದರಲ್ಲೇ 8,060 ಪ್ರಕರಣಗಳು ವರದಿಯಾಗಿವೆ ಎಂದು ಡಾಟಾ ಹೇಳುತ್ತದೆ. 
 
2001ರಲ್ಲಿ  ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿಸಿ 16,075 ಪ್ರಕರಣಗಳು  ದಾಖಲಾದರೆ, 2013ರ ರಲ್ಲಿ ಈ ಸಂಖ್ಯೆ 33,707. ಇದು ಅತ್ಯಾಚಾರ ಪ್ರಕರಣಗಳಲ್ಲಿ  52.30% ಏರಿಕೆಯಾಗಿರುವುದನ್ನು ಸೂಚಿಸುತ್ತದೆ. 

Share this Story:

Follow Webdunia kannada