Webdunia - Bharat's app for daily news and videos

Install App

ನೋಟು ನಿಷೇಧಕ್ಕೆ ಒಂದು ತಿಂಗಳು; ನಿಂತಿಲ್ಲ ಪರದಾಟ

Webdunia
ಗುರುವಾರ, 8 ಡಿಸೆಂಬರ್ 2016 (09:38 IST)
500 ಹಾಗೂ 10000 ರೂಪಾಯಿನೋಟು ನಿಷೇಧ ಮಾಡಿ ಒಂದು ತಿಂಗಳಾಗಿದ್ದು ಇನ್ನುವರೆಗೂ ಜನರ ಪರದಾಟ ಮಾತ್ರ ಬಹುತೇಕ ಹಾಗೆ ಉಳಿದಿದೆ.ನವೆಂಬರ್ 8 ರ ಮಧ್ಯರಾತ್ರಿ ಕೇಂದ್ರ ಸರ್ಕಾರ 500 ಹಾಗೂ 1,000 ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿತ್ತು.
ದೇಶದೆಲ್ಲೆಡೆ ಎಟಿಎಂಗಳ ಮುಂದೆ 'ನೋ ಕ್ಯಾಶ್' ಬೋರ್ಡ್ ನೇತುಹಾಕಿರುವುದೇ ಕಂಡು ಬರುತ್ತಿದೆ
 
ಬ್ಯಾಂಕ್‌‌ಗಳ ಮುಂದೆ, ಎಟಿಎಂಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೂ ಎಲ್ಲರಿಗೂ ಹಣ ಸಿಗುತ್ತಿಲ್ಲ. ಸಿಕ್ಕರೂ ಬ್ಯಾಂಕ್‌ಗಳಲ್ಲಿ ನೀಡುತ್ತಿರುವುದು 2,000 ರೂಪಾಯಿ ನೋಟುಗಳಾಗಿರುವುದರಿಂದ ಚಿಲ್ಲರೆಗಾಗಿ ಜನರು ಪರದಾಡುತ್ತಿದ್ದಾರೆ. 
 
ನಮ್ಮ ದುಡ್ಡನ್ನು ಪಡೆಯಲು ನಾವೇ ಪರದಾಡಬೇಕಾಗಿದೆ ಎಂದು ಜನರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷಗಳ ಆಗ್ರಹ ಸಹ ಮುಂದುವರೆದಿದೆ. 
 
ಕರ್ನಾಟಕದಾದ್ಯಂತ ಒಟ್ಟು 16,929 ಎಟಿಎಂಗಳಿವೆ. ಅದರಲ್ಲಿ  ಕೇವಲ ಶೇ.70 ರಷ್ಟು ಎಟಿಎಂಗಳಲ್ಲಿ ಮಾತ್ರ ಹೊಸ ನೋಟುಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಕೇವಲ ಶೇ. 20  ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ತುಂಬಲಾಗುತ್ತದೆ. ಕೆಲವೇ ಕೆಲವು ಎಟಿಎಂ ಗಳಲ್ಲಿ ಮಾತ್ರ 500 ಹಾಗೂ 100 ರು ನೋಟು ಸಿಗುತ್ತಿವೆ, ಉಳಿದಂತೆ ಎಲ್ಲಾ ಎಟಿಎಂ ಗಳಲ್ಲೂ 2 ಸಾವಿರ ರೂಪಾಯಿ ನೋಟುಗಳು ಮಾತ್ರ ಸಿಗುತ್ತಿವೆ. ಹೀಗಾಗಿ ಚಿಲ್ಲರೆಗಾಗಿ ಇನ್ನಿಲ್ಲದ ಪ್ರಯಾಸ ಮುಂದುವರೆದಿದೆ.
 
ಬ್ಯಾಂಕ್, ಎಟಿಎಂಗಳ ಮುಂದೆ ಹಿಂದಿನಂತೆ ಕೀಲೋಮೀಟರ್‌ಗಟ್ಟಲೆ ಸರತಿ ಸಾಲು ಇಲ್ಲವಾದರೂ ಸಾಲಂತೂ ಕರಗಿಲ್ಲ. ಆದರೆ ಹಣಕ್ಕಾಗಿ ಅದರಲ್ಲೂ ಚಿಲ್ಲರೆಗಾಗಿ ಜನರ ಪರದಾಟ ನಿಂತಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments