Select Your Language

Notifications

webdunia
webdunia
webdunia
webdunia

ಬಿಲಿಯಾಧಿಪತಿಯಾಗಿದ್ದವರು ಈಗ ದಿನಗೂಲಿ ನೌಕರ

ಬಿಲಿಯಾಧಿಪತಿಯಾಗಿದ್ದವರು ಈಗ ದಿನಗೂಲಿ ನೌಕರ
ಹೈದರಾಬಾದ್ , ಬುಧವಾರ, 15 ಏಪ್ರಿಲ್ 2015 (14:40 IST)
ಪೋಸ್ಟರ್‌ಬಾಯ್‌ನಿಂದ ಕೈದಿ, ಬಿಲಿಯಾಧಿಪತಿಯಾಗಿದ್ದವರು ದಿನಗೂಲಿ ನೌಕರ. ಸತ್ಯಂ ಕಂಪ್ಯೂಟರ್ ಸಂಸ್ಥಾಪಕ ರಾಮಲಿಂಗಾ ರಾಜು  2009ರಲ್ಲಿ ತಪ್ಪೊಪ್ಪಿಗೆ ಪತ್ರ ಬರೆದು ಅವ್ಯವಹಾರಗಳನ್ನು ಬಹಿರಂಗ ಮಾಡಿದ ನಂತರ ಅವರ ಜೀವನದ ದಿಕ್ಕೇ ಬದಲಾಯಿತು.
 
ಬಹು ಕೋಟಿ ಹಣಕಾಸು ವಂಚನೆ ಹಗರಣಕ್ಕಿಂತ ಮುಂಚೆ ಅವರ ಭಂಡಾರಕ್ಕೆ ಹಣದ ಹೊಳೆಯೇ ಹರಿದುಬರುತ್ತಿತ್ತು. ಈಗ ದಿನಕ್ಕೆ 50 ರೂ. ಸಂಪಾದಿಸಲು ಜೈಲಿನಲ್ಲಿ ರಾಜು ಬೆವರುಹರಿಸಬೇಕಾಗಿದೆ. ಸಂಪಾದನೆ ಮಾಡಿದ ಅಷ್ಟೂ ಹಣವನ್ನು ಖರ್ಚು ಮಾಡಲು ಕೂಡ ರಾಜುಗೆ ಸಾಧ್ಯವಿಲ್ಲ. ಜೈಲಿನ ನಿಯಮದ ಪ್ರಕಾರ, ವೈಯಕ್ತಿಕ ಉದ್ದೇಶಗಳಿಗೆ ದಿನನಿತ್ಯ ಅದರ ಅರ್ಧದಷ್ಟು ಹಣ ಮಾತ್ರ ಬಳಸಲು ಅವಕಾಶವಿದೆ. 
 
 ರಾಜು ಅವಶ್ಯಕ ವಸ್ತುಗಳಾದ ಸೋಪು, ಟೂತ್ ಪೇಸ್ಟ್, ಬಿಸ್ಕಿಟ್, ಬ್ರೆಡ್, ನೀರಿನ ಸೀಸೆಗಳನ್ನು 25 ರೂ.ಗಳಲ್ಲಿ ಜೈಲಿನ ಕ್ಯಾಂಟೀನ್‌ನಿಂದ ಖರೀದಿಸಬಹುದು. ಉಳಿದ ಹಣವನ್ನು ಅವರ ಹೆಸರಿನಲ್ಲಿ ತೆರೆದ ಖಾತೆಗೆ ಜಮಾ ಮಾಡಬೇಕು. ಆದರೆ ರಾಜು ಸ್ಕಿಲ್ಡ್ ಆಗಿದ್ದು, ಅರೆಕುಶಲ ಕರ್ಮಿಗಳು ಮತ್ತು ಕುಶಲಕರ್ಮಿಗಳಲ್ಲದ ಕೈದಿಗಳ ಜೊತೆ ಕೆಲಸಕ್ಕೆ ಹಾಜರಿಯಾಗಬೇಕಾಗಿದೆ.
 
ರಾಜುವಿಗೆ ವಹಿಸುವ ಕೆಲಸದ ಬಗ್ಗೆ ಜೈಲು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅವರನ್ನು ಲೈಬ್ರರಿಯ ನಿರ್ವಹಣೆಗೆ ಅಥವಾ ವಯಸ್ಕ ಶಿಕ್ಷಣ ಕಾರ್ಯಕ್ರಮದಲ್ಲಿ ನೇಮಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ
ಅನಕ್ಷರಸ್ಥ ಕೈದಿಗಳಿಗೆ ಕಲಿಸುವ ಬಗ್ಗೆಯೂ ನಾವು ಗಮನಹರಿಸುತ್ತೇವೆ. ಮೂರನೇ ಆಯ್ಕೆ ನಾವು ಕೈದಿಗಳಿಗೆ ನೀಡುವ ಮೂಲಕ ಕಂಪ್ಯೂಟರ್‌ ಕೋರ್ಸ್‌ಗಳಲ್ಲಿ ಅವರು ಭಾಗಿಯಾಗುವಂತೆ ಮಾಡುವುದು ಎಂದು ಹೇಳಿದ್ದಾರೆ. 

Share this Story:

Follow Webdunia kannada