Webdunia - Bharat's app for daily news and videos

Install App

ಮದುವೆಯ ದಿನನೇ ಅತ್ಯಾಚಾರದ ಆರೋಪದ ಮೇಲೆ ವರ ಅರೆಸ್ಟ್

Webdunia
ಬುಧವಾರ, 21 ಜೂನ್ 2017 (12:45 IST)
ಇದೊಂದು ಅಪರೂಪದ ಘಟನೆಯಾಗಿದ್ದು ವಿವಾಹವಾದ ದಿನವೇ ಅತ್ಯಾಚಾರದ ಆರೋಪದ ಮೇಲೆ ನರ ಪೊಲೀಸರ ಅತಿಥಿಯಾಗಿದ್ದಾನೆ.
 
 28 ವರ್ಷ ವಯಸ್ಸಿನ ದಶರಥ್ ಖೋಠ್ ಎನ್ನುವ ವ್ಯಕ್ತಿಯ ವಿವಾಹ ಸಮಾರಂಭದ ಔಪಚಾರಿಕತೆಗಳು ಇಂದು ಬೆಳಿಗ್ಗೆ ಮುಗಿಯುತ್ತಿದ್ದಂತೆ, ವರನ ಮನೆಗೆ ಬಂದ ಶಿರಾಲಾ ಪೊಲೀಸ್ ಠಾಣೆಯ ಪೊಲೀಸರು ಆತನನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ಆರೋಪಿ ದಶರಥ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಆತನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.    
 
ಸಾಂಗ್ಲಿ ಜಿಲ್ಲೆಯ ದೇವವಾಡಿ ಗ್ರಾಮದ ನಿವಾಸಿಯಾದ ದಶರಥ್ ಕಳೆದ ನವೆಂಬರ್ ತಿಂಗಳಲ್ಲಿ ಮನೆಯಲ್ಲಿ ಏಕಾಂಗಿಯಾಗಿದ್ದ ಯುವತಿಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದನು. ಯಾರಿಗಾದರೂ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು. ಕೆಲ ದಿನಗಳ ಹಿಂದೆ ಮನೆಯಲ್ಲಿ ಯುವತಿ ಏಕಾಂಗಿಯಾಗಿದ್ದಾಗ ಮತ್ತೆ ಅತ್ಯಾಚಾರವೆಸಗಿದ್ದನು. ಆದರೆ, ಈ ಬಾರಿ ಮೌನವಾಗಿರದ ಯುವತಿ, ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಕಾಟೆ ತಿಳಿಸಿದ್ದಾರೆ. 
 
ಖೋಟೆ ವಿರುದ್ಧ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ), 450 (ಮನೆ ಅಪರಾಧ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಎಸ್ಸಿಎಸ್ಟಿ ತಡೆಗಟ್ಟುವಿಕೆಗೆ ಸೆಕ್ಷನ್ 3 (2) (ಡಬ್ಲ್ಯು) ಮತ್ತು 3 (2) (ವಿ) (ಎ) ದೌರ್ಜನ್ಯ ಕಾಯಿದೆ, 2015 ನ್ನು ದಾಖಲಿಸಲಾಗಿದೆ.
 
ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಆಕೆಯ ಪೋಷಕರು ಕೂಲಿ ಕಾರ್ಮಿಕರಾಗಿದ್ದಾರೆ, ಆರೋಪಿ, ದಶರಥ್ ಖೋಟ್, ಡೈರಿಯಲ್ಲಿ ಲ್ಯಾಬ್ ತಂತ್ರಜ್ಞನಾಗಿದ್ದಾನೆ.
 
ಆರೋಪಿ ದಶರಥ್ ಖೋಟೆಗೆ ಶಿಕ್ಷೆಯಾಗಲು ಪೂರಕವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments