ಸಂಪೂರ್ಣ ದೇಶ ರಾಷ್ಟ್ರಪಿತ ಭಾನುವಾರ ಮಹಾತ್ಮಾ ಗಾಂಧೀಜಿಯವರ 147ನೇ ಜಯಂತಿಯನ್ನು ಆಚರಿಸುತ್ತಿದ್ದರೆ ಬಲಪಂಥೀಯ ಸಂಘಟನೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಮೀರತ್‌ನಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪುತ್ಥಳಿಯನ್ನು ಅನಾವರಣಗೊಳಿಸಿದೆ.
ಜತೆಗೆ ಗಾಂಧಿ ಜಯಂತಿಯನ್ನು ಧಿಕ್ಕಾರ್ ದಿವಸ್ ಆಗಿ ಆಚರಿಸಿದೆ.
ಇದು ಗೋಡ್ಸೆಯ ಪ್ರಥಮ ಪ್ರತಿಮೆಯಾಗಿದ್ದು ಶಾರದಾ ರಸ್ತೆಯಲ್ಲಿರುವ ಮಹಾಸಭಾದ ಕಚೇರಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
2014ರಲ್ಲಿ ನಾವು ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸಲು ಪ್ರಯತ್ನಿಸಿದ್ದೆವು. ಆದರೆ ಪೊಲೀಸರು ಮತ್ತು ಎಡ ಪಂಥೀಯರು ಇದನ್ನು ವಿರೋಧಿಸಿ ಉದ್ದೇಶಿತ ಸ್ಥಳವನ್ನು ಸೀಲ್ ಮಾಡಲಾಯಿತು. ಪ್ರಕರಣ ಕೋರ್ಟ್ ಮೆಟ್ಟಿಲನ್ನು ಸಹ ಏರಿತು.ಈ ಬಾರಿ ನಾವು ಬಹಳ ಎಚ್ಚರಿಕೆಯಿಂದ ಗಾಂಧಿ ಜಯಂತಿಯಂದು ಗೋಡ್ಸೆ ಪ್ರತಿಮೆಯನ್ನು ಅನಾವರಣಗೊಳಿಸಿದೆವು. ಈ ಕಾರ್ಯಕ್ರಮಕ್ಕೆ ಇದಕ್ಕಿಂತ ಉತ್ತಮ ದಿನ ಬೇರೆ ಇರಲಿಲ್ಲ. ಗಾಂಧಿಯವರು ನಡೆದ ಹಾದಿಯನ್ನು ಅನುಸರಿಸುವುದನ್ನು ನಿಲ್ಲಿಸಿ ಎಂದು ದೇಶವಾಸಿಗಳಿಗೆ ತೋರಿಸಲು ಈ ಮಹತ್ವದ ಹೆಜ್ಜೆಯನ್ನಿಟ್ಟಿದ್ದೇವೆ, ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹೇಳಿದ್ದಾರೆ.
50ಕೆಜಿ ತೂಕದ ಗೋಡ್ಸೆ ಪ್ರತಿಮೆಯನ್ನು ಜೈಪುರದಲ್ಲಿ ತಯಾರಿಸಲಾಗಿದ್ದು ಹಿಂದೂ ಮಹಾಸಭಾ ಉತ್ತರ ಪ್ರದೇಶದ ಅಧ್ಯಕ್ಷ ಯೋಗೇಂದ್ರ ವರ್ಮಾ ಇದನ್ನು ಮೀರತ್‌ಗೆ ತಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ