Webdunia - Bharat's app for daily news and videos

Install App

ಬಾರ್‌ಗರ್ಲ್‌ಗಳಿಗೆ ಕರ್ತವ್ಯನಿರ್ವಹಣೆಯಲ್ಲಿದ್ದ ಪೊಲೀಸರಿಂದ ಕಿಸ್ಸಿಂಗ್: ಪೇದೆಗಳ ಅಮಾನತ್ತಿಗೆ ಆದೇಶ

Webdunia
ಶನಿವಾರ, 18 ಏಪ್ರಿಲ್ 2015 (15:05 IST)
ಕರ್ತವ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆಗಳಾದ ಸಂಜಯ್ ಬಬ್ಬರ್ ಮತ್ತು ರಷೀದ್ ಮುಲಾನಿ ಬಾರ್‌ಗರ್ಲ್‌ಗಳೊಂದಿಗೆ ಕಿಸ್ ಕೊಡುತ್ತಿರುವುದು ಹಾಗೂ ನೃತ್ಯ ಮಾಡುತ್ತಿದ್ದ ವಿಡಿಯೋ ಪೊಲೀಸ್ ಆಯುಕ್ತರಿಗೆ ತಲುಪಿ ಪೊಲೀಸ್ ಇಲಾಖೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ಮನಪಾಡಾ ಪೊಲೀಸ್ ಠಾಣೆಯ ಇಬ್ಬರು ಪೇದೆಗಳು ಕರ್ತವ್ಯನಿರ್ವಹಣೆಯಲ್ಲಿದ್ದಾಗ ಬಾರ್‌ಗರ್ಲ್‌ಗಳೊಂದಿಗೆ ಕಿಸ್ಸಿಂಗ್‌ ಮತ್ತು ನೃತ್ಯದಲ್ಲಿ ತೊಡಗಿರುವುದು ಠಾಣೆ ಪೊಲೀಸರ ದುರ್ವರ್ತನೆ ಪೊಲೀಸ್ ಇಲಾಖೆಗೆ ಅವಮಾನ ತಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿ ಆರೋಪಿ ಪೇದೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ಜಂಟಿ ಪೊಲೀಸ್ ಆಯುಕ್ತ ವಿ.ವಿ.ಲಕ್ಷ್ಮಿನಾರಾಯಣಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಪರಿಚಿತ ಸಂಖ್ಯೆಯಿಂದ ವಿಡಿಯೋ ಕ್ಲಿಪ್ಪಿಂಗ್‌ ಮ್ಯಾಸೇಜ್ ರವಾನೆಯಾಗಿದೆ. ವಿಡಿಯೋದಲ್ಲಿ ಪೇದೆಗಳಾದ ಸಂಜಯ್ ಬಬ್ಬರ್ ಮತ್ತು ರಷೀದ್ ಮುಲಾನಿ ಬಾರ್‌ಗರ್ಲ್‌ಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಬಹಿರಂಗವಾಗಿದೆ.

ಅಪರಾಧ ಇಲಾಖೆಯ ಕೆಲ ಪೊಲೀಸರಿಗೆ ಉಚಿತ ಡ್ರಿಂಕ್ಸ್ ಊಟ ಮತ್ತು ಬಾರ್‌ಗರ್ಲ್‌ಗಳೊಂದಿಗಿನ ಸಲುಗೆಗೆ ಅವಕಾಶ ನೀಡದಿದ್ದಲ್ಲಿ ಬಾರ್‌ ಮೇಲೆ ರೈಡ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಾರೆ ಎಂದು ಬಾರ್ ಮಾಲೀಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಆರೋಪಿ ಪೇದೆಗಳನ್ನು ಅಮಾನತ್ತುಗೊಳಿಸಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments