Webdunia - Bharat's app for daily news and videos

Install App

ಚಹಾ ಕಪ್ ಮೇಲೂ ಮೋದಿ, ಅಮಿತ್ ಶಾ

Webdunia
ಶನಿವಾರ, 31 ಜನವರಿ 2015 (13:35 IST)
ಕಳೆದ ತಿಂಗಳು ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿರುವ ಬಿಜೆಪಿ ಈ ಬಾರಿ ಮೋದಿ ಮೋಡಿ ಬಳಸಿ ದಾಖಲೆಯ ಸದಸ್ಯತ್ವವನ್ನು   ನೊಂದಾಯಿಸಿಕೊಳ್ಳುವ ಗುರಿ ಹೊಂದಿದೆ. ತನ್ನ ಈ ಉದ್ದೇಶ ಸಾಧನೆಗಾಗಿ ಕಮಲ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು ಚಹಾ ಕಪ್ ಮೇಲೂ  ಮೋದಿ- ಅಮಿತ್ ಶಾ ಭಾವಚಿತ್ರ ಪ್ರಕಟಿಸಿ ಪ್ರಚಾರ ಕೈಗೊಂಡಿದೆ. 
 
ದೆಹಲಿ- ಅಮೃತಸರ್ ಶತಾಬ್ಧಿ ರೈಲಿನಲ್ಲಿ ಮಾರಲ್ಪಡುವ ಟೀ ಕಪ್‌ ಮೇಲೆ  ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಪ್ರೀಯ ಅಧ್ಯಕ್ಷ ಅಮಿತ್ ಶಾರ ಚಿತ್ರವಿದ್ದು, ಬಿಜೆಪಿಯ ಸದಸ್ಯರಾಗಿ ನಮ್ಮ ಜತೆ ಸೇರಿ, ದೇಶವನ್ನು ಕಟ್ಟಿ  ಎಂದು ಬರೆಯಲಾಗಿದೆ. ಪ್ರಚಾರದ ಈ ತಂತ್ರವನ್ನು ನೋಡಿ ಪ್ರಯಾಣಿಕರು ದಂಗಾಗಿ ಹೋಗಿದ್ದಾರೆ ಮತ್ತು ಇದೀಗ ವಿವಾದವಾಗಿ ತಲೆ ಎತ್ತಿದೆ. 
 
ಶತಾಬ್ಧಿಯಲ್ಲಿ ಕೆಟರಿಂಗ್ ಮಾಡುವವರ ಪ್ರಕಾರ ಒಂದು ವಾರದಿಂದ ಇಂತಹ ಕಪ್‌ನಲ್ಲಿ ಚಹಾವನ್ನು ನೀಡಲಾಗುತ್ತಿದೆ. 
 
ಬಿಜೆಪಿ ಪ್ರಚಾರಕ್ಕೆ ಬಳಸಿರುವ ಈ ಕಪ್‌ನಲ್ಲಿ ಸಂಕಲ್ಪ ಫೌಂಡೇಶನ್ ಎಂಬ ಸ್ವಯಂ ಸೇವಾ ಸಂಸ್ಥೆಯ ಹೆಸರು  ನಮೂದಾಗಿದೆ.  ಈ ಕುರಿತು ಸಂಕಲ್ಪ ಫೌಂಡೇಶನ್‌ನವರನ್ನು ವಿಚಾರಿಸಲಾಗಿ ಈ ಕಪ್‌ಗಳನ್ನು ಮೆರವಣಿಗೆಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಕಣ್ತಪ್ಪಿನಿಂದಾಗಿ ಇದು ರೈಲು ಇಲಾಖೆಗೆ ರವಾನೆಯಾಗಲ್ಪಟ್ಟಿದೆ. ರೈಲಿನಲ್ಲಿ  ಸ್ವಚ್ಛ ಭಾರತ ಅಭಿಯಾನದ ಕುರಿತ ಕಪ್ ರವಾನೆಯಾಗಬೇಕಿತ್ತು. ಆದರೆ ಅರಿವಿಲ್ಲದೆ ಬಿಜೆಪಿ ಪ್ರಚಾರದ ಕಪ್ ರವಾನೆಯಾಗಿದೆ ಎಂದಿದ್ದಾರೆ. 
 
ಈ ತಪ್ಪಿಗಾಗಿ ಸಂಕಲ್ಪ ಫೌಂಡೇಶನ್ ಮೇಲೆ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ರೈಲು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments