Select Your Language

Notifications

webdunia
webdunia
webdunia
webdunia

ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಓಲಾ ಕಾರು ಚಾಲಕನ ಬಂಧನ

ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ:  ಓಲಾ ಕಾರು ಚಾಲಕನ ಬಂಧನ
ಜೈಪುರ್ , ಶುಕ್ರವಾರ, 4 ಸೆಪ್ಟಂಬರ್ 2015 (19:54 IST)
ವಿದೇಶಿ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓಲಾ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಓಲಾ ಕಾರು ಚಾಲಕನಿಗೆ ಹಣ ಪಾವತಿಸುವ ಸಂದರ್ಭದಲ್ಲಿ ಆತ ನನ್ನ ಕೈ ಹಿಡಿದು ಕಾರಿನೊಳಗೆ ಎಳೆಯಲು ಪ್ರಯತ್ನಿಸಿದ. ನಾನು ಜೋರಾಗಿ ಕೂಗಿದ್ದರಿಂದ ನನ್ನ ಕೈ ಬಿಟ್ಟು ಪರಾರಿಯಾಗಿದ್ದಾನೆ ಎಂದು ಫಿನ್‌ಲ್ಯಾಂಡ್ ಮೂಲದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. 
 
ರಾತ್ರಿ ಸುಮಾರು 1 ಗಂಟೆಗೆ ಘಟನೆ ನಡೆದಿದ್ದು ಮಾರನೇ ದಿನ ಬೆಳಿಗ್ಗೆ ವಿದೇಶಿ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರು ದಾಖಲಾದ ನಂತರ ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಆರೋಪಿ ಸೂರ್ಯವೀರ್ ಪೊದ್ದಾರ್ ವಿರುದ್ಧ ಪ್ರಕರಣ ದಾಖಲಾದ ಕೆಲವೇ ನಿಮಿಷಗಳಲ್ಲಿ ಆತನನ್ನು ಅಮಾನತ್ತುಗೊಳಿಸಿ ಓಲಾ ಕಂಪೆನಿ ಆದೇಶ ಹೊರಡಿಸಿದೆ. ಪೊಲೀಸರಿಗೆ ಕಾರು ಚಾಲಕನ ಹೆಚ್ಚಿನ ಮಾಹಿತಿ ಬಯಸಿದಲ್ಲಿ ನೀಡಲು ಸಿದ್ದವಾಗಿದ್ದೇವೆ ಎಂದು ಓಲಾ ಅಧಿಕಾರಿಗಳು ತಿಳಿಸಿದ್ದಾರೆ. 
 

Share this Story:

Follow Webdunia kannada