Webdunia - Bharat's app for daily news and videos

Install App

ರಾಷ್ಟ್ರಪತಿ, ಪ್ರಧಾನಿ ಹುದ್ದೆ ವಜಾ ಬಯಸುತ್ತಿದ್ದ ಮಥುರಾ ಗಲಭೆಕೋರರು

Webdunia
ಶನಿವಾರ, 4 ಜೂನ್ 2016 (17:27 IST)
ಮಥುರಾದ ಜವಾಹರ್ ಬಾಗ್ ಪಾರ್ಕ್ ಹಿಂಸಾಚಾರಕ್ಕೆ ಕಾರಣವಾದ ಆಜಾದ್‌ ಭಾರತ್‌ ವಿಧಿಕ್‌ ವೈಚಾರಿಕ್‌ ಕ್ರಾಂತಿ ಸತ್ಯಾಗ್ರಹಿ ಸಂಘಟನೆ ಕೆಲವು ವಿಚಿತ್ರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿತ್ತು.

ತಾವು ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅನುನಾಯಿಗಳು ಎಂದು ಹೇಳಿಕೊಳ್ಳುತ್ತಿರುವ ಈ ಗುಂಪು ರಾಷ್ಟ್ರಪತಿ, ಪ್ರಧಾನಿ ಹುದ್ದೆ ಬೇಡ ಎಂಬ ಬೇಡಿಕೆಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿತ್ತು. 
 
ನೇತಾಜಿ ಅವರಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸುತ್ತಿರುವ ಈ ಗುಂಪು ರೂಪಾಯಿ ಬದಲಿಗೆ ಆಜಾದ್‌ ಹಿಂದ್‌ ಫೌಜ್‌  ಕರೆನ್ಸಿ ಜಾರಿಗೆ ತರಬೇಕು ಎಂದು ಹಠ ಹಿಡಿದಿತ್ತು.
 
ಒಂದು ರೂಪಾಯಿಗೆ 40 ಲೀಟರ್‌ ಪೆಟ್ರೋಲ್‌ ಅಥವಾ 60 ಲೀಟರ್‌ ಡೀಸೆಲ್‌ ದೊರೆಯುವಂತಾಗಬೇಕು, ಮಾಂಸಾಹಾರ ನಿಷೇಧಿಸಿ, ಮಾಂಸಾಹಾರಿಗಳನ್ನು ಶಿಕ್ಷಿಸಬೇಕು ಎಂಬುದು ಈ ಗುಂಪಿನ ಇತರ ಬೇಡಿಕೆಗಳಾಗಿವೆ. 
 
ಮಥುರಾದಲ್ಲಿ ಜವಾಹರ್‌ ಬಾಗ್‌ ಎಂಬ 260 ಎಕರೆಯಷ್ಟು ವಿಶಾಲವಾದ ಪ್ರದೇಶವಿದ್ದು ಪ್ರಸಿದ್ಧ ಧಾರ್ಮಿಕ ನಾಯಕ ಜೈ ಗುರುದೇವ್‌ 2012ರಲ್ಲಿ ನಿಧನ ಹೊಂದಿದ ಬಳಿಕ 3,000 ಜನರುಳ್ಳ ಪಡೆಯೊಂದು ಜವಾಹರ್‌ ಬಾಗ್‌ನಲ್ಲಿ ಸ್ಥಳವನ್ನು ಆಕ್ರಮಿಸಿಕೊಂಡು 'ಆಜಾದ್‌ ಭಾರತ್‌ ವಿಧಿಕ್‌ ವೈಚಾರಿಕ್‌ ಕ್ರಾಂತಿ ಸತ್ಯಾಗ್ರಹಿ' ಎಂಬ ಹೆಸರಿನಲ್ಲಿ ಧರಣಿ ನಡೆಸುತ್ತಿತ್ತು. ಹೈಕೋರ್ಟ್ ಆದೇಶದ ಮೇಲೆ ಆ ಸ್ಥಳವನ್ನು ತೆರವುಗೊಳಿಸಲು ಪ್ರಯತ್ನಪಟ್ಟಾಗ ಭುಗಿಲೆದ್ದ ಗಲಭೆಯಲ್ಲಿ ಎಸ್‌ಪಿ, ಠಾಣಾಧಿಕಾರಿ ಸೇರಿದಂತೆ ಈವರೆಗೆ 24 ಜನರು ಸಾವನ್ನಪ್ಪಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೃದಯಾಘಾತವಾಗುವಾಗ ಮುಖದಲ್ಲಿ ಈ ಬದಲಾವಣೆಯಾಗುತ್ತದೆ

ಬೇರೊಬ್ಬನ ಜತೆ ನಿಶ್ಚಿತಾರ್ಥ: ಆಟೊದಲ್ಲೇ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪ್ರೇಮಿಗಳು ಪತ್ತೆ

ಹಾಸನದಲ್ಲಿ ಮತ್ತೊಂದು ಹೃದಯಾಘಾತ: ನವವಿವಾಹಿತ ಸಾವು

ತಮಿಳುನಾಡು ವ್ಯಕ್ತಿಯ ಲಾಕಪ್ ಡೆತ್ ಪ್ರಕರಣ: ಐದು ಪೊಲೀಸರು ಅರೆಸ್ಟ್‌

ಮೂರು ವರ್ಷಗಳಿಂದ ಫ್ಲ್ಯಾಟ್ ನಲ್ಲಿ ಲಾಕ್ ಮಾಡಿಕೊಂಡಿದ್ದ ವ್ಯಕ್ತಿ: video

ಮುಂದಿನ ಸುದ್ದಿ
Show comments