Webdunia - Bharat's app for daily news and videos

Install App

ಒಬಾಮಾ ಕೊನೆ ಭಾಷಣ: ಭಾರತ ಸಂಸ್ಕೃತಿಗೆ ಫುಲ್ ಫಿದಾ ಆದ ಅಧ್ಯಕ್ಷರು

Webdunia
ಮಂಗಳವಾರ, 27 ಜನವರಿ 2015 (13:57 IST)
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಕೊನೆಯ ದಿನವಾದ ಇಂದು ಇಲ್ಲಿನ ಸಿರಿಪೋರ್ಟ್‌ನಲ್ಲಿ ಮಾತನಾಡಿದ್ದು, ಭಾರತಕ್ಕೆ ವಿಶ್ವ ಸಂಸ್ಥೆಯಲ್ಲಿ ಖಾಯಂ ಸ್ಥಾನ ಸಿಗಬೇಕಿದೆ. ಅಲ್ಲದೆ ಇಲ್ಲಿನ ಯುವಕರು ಜಗತ್ತನ್ನೇ ಬದಲಿಸಬಲ್ಲರು ಎಂದು ಭಾರತವನ್ನು ಕೊಂಡಾಡಿದರು. 
 
ತಮ್ಮ ಭಾರತ ಭೇಟಿಯಲ್ಲಿ ಇದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಭಾಷಣ ಮಾಡಿದ ಅವರು, ಭಾರತೀಯ ಸಂಸ್ಕೃತಿಗೆ ನಾನು ಸಂಪೂರ್ಣವಾಗಿ ಮಾರುಹೋಗಿದ್ದೇನೆ. ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅಲ್ಲದೆ ನನಗೆ ರಾಷ್ಟ್ರಪತಿ ಭವನದಲ್ಲಿ ಭದ್ರತೆ ನೀಡಿದ್ದೂ ಕೂಡ ಒರ್ವ ಮಹಿಳಾ ಅಧಿಕಾರಿ. ನಿನ್ನೆ ಮಹಿಳಾ ಸೈನಿಕರ ಪೆರೇಡ್ ನನ್ನ ಕಣ್ಮನ ಸೆಳೆಯಿತು. ಅಲ್ಲದೆ ತುಂಬಾ ಇಷ್ಟವಾಯಿತು ಕೂಡ. ರಾಷ್ಟ್ರಗಳಲ್ಲಿಯೂ ಕೂಡ ಹೆಣ್ಣನ್ನು ಕಡೆಗಣಿಸಲಾಗುತ್ತಿದ್ದು, ಜಾಗತೀಕರಣದ ಈ ಯುಗದಲ್ಲಿ ಹೆಣ್ಣಿಗೆ ಸೂಕ್ತ ಸ್ಥಾನ ಸಿಗಬೇಕಿದೆ. ಆಕೆಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯದ ಜೊತೆಗೆ ಉದ್ಯಾಗ ನಿರ್ವಹಣೆಯಲ್ಲಿಯೂ ಸೂಕ್ತ ಸ್ಥಾನ ಮಾನ ನೀಡಬೇಕಿದೆ ಎಂದರು.  
 
ಇಲ್ಲಿನ ಯುವಜನರು ಶಿಕ್ಷಣಕ್ಕೆಂದು ಭಾರತದ ವಿದ್ಯಾರ್ಥಿಗಳು ಅಮೆರಿಕಾಗೆ ಬರಬೇಕು. ತಂತ್ರಜ್ಞಾನ ಆವಿಷ್ಕಾರ, ಅಭಿವೃದ್ಧಿ ಹಾಗೂ ಬಳಕೆಯಲ್ಲಿ ಪ್ರಪಂಚದಲ್ಲಿಯೇ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಯುವಕರು ಪ್ರಪಂಚವನ್ನೇ ಬದಲಿಸಬಲ್ಲರು. ಹಾಗಾಗಿ ಶಿಕ್ಷಕ್ಕೆಂದು ಅಮೆರಿಕಾಗೆ ಬರುವವರ ಸಂಖ್ಯೆ ಹೆಚ್ಚಬೇಕು ಎಂದರು. 
 
ಇನ್ನು ಭಾರತ ಇತರೆ ರಾಷ್ಟ್ರಗಳಿಗೆ ಮಾದರಿಯಾಗುತ್ತಿದ್ದು, ಪ್ರಾಣಿ ರಕ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅಂತೆಯೇ ಪರಮಾಣು ಹಾಗೂ ಇಂಧನ ಬಳಕೆಯಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುತ್ತಿದೆ ಎಂದ ಅವರು, ಭಾರದಲ್ಲಿ ಹೆಚ್ಚಿನ ಸಂಪತ್ತಿದ್ದು, ಅದನ್ನು ಯೋಗ್ಯವಾಗಿ ಬಳಸಿಕೊಳ್ಳುವಲ್ಲಿ ಭಾರತ ಸಫಲವಾಗುತ್ತಿದೆ. ನಮ್ಮೊಂದಿಗೆ ಭಾರತ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದು, ಈ ಮೂಲಕ ಭಾರತ ಮಹತ್ವದ ಸಾಧನೆ ಎಡೆಗೆ ತೆರಳಲಿದೆ ಎಂದರು. 
 
ಇದೇ ವೇಳೆ, ರಾಷ್ಟ್ರದ ಗಣ್ಯ ವ್ಯಕ್ತಿಗಳಾದ ಗಾಂಧೀಜಿ, ವಿವೇಕಾನಂದ, ಕೈಲಾಶ್ ಸತ್ಯಾರ್ಥಿ, ಶಾರುಖ್ ಖಾನ್ ಹಾಗೂ ಮೇರಿ ಕೋಂ ಅವರ ಸಾಧನೆಯನ್ನು ಸ್ಮರಿಸಿದರು. 
 
ಕೊನೆಯದಾಗಿ ನಾನು ಭಾರತಕ್ಕೆ ಬರುವಾಗ ಅಮೆರಿಕನ್ನರ ಸ್ನೇಹವನ್ನು ಜೊತೆಯಲ್ಲಿ ತಂದಿದ್ದೆ. ನಾನು ಭಾರತಕ್ಕೆ ಎಂದಿಗೂ ಚಿರಋಣಿ ಎಂದ ಅವರು, ಭಾರತ ಸಂಪ್ರದಾಯದಂತೆ ಕೈ ಮುಗಿದು ಜೈ ಹಿಂದ್ ಎಂದು ಭಾಷಣವನ್ನು ಅಂತ್ಯಗೊಳಿಸಿದರು.  
 
ಬಳಿಕ ತಮ್ಮ ಪತ್ನಿ ಮಿಶೆಲ್ ಅವರೊಂದಿಗೆ ವೇದಿಕೆಯಿಂದ ಕೆಳಗಿಳಿದ ಒಬಾಮ, ಸಾರ್ವಜನಿಕರೊಂದಿಗೆ ಮುಕ್ತವಾಗಿ ಮಾತನಾಡಿ ಕೈ ಕುಲುಕಿ ಫೋಟೋಗೆ ಪೋಸ್ ನೀಡಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments