Select Your Language

Notifications

webdunia
webdunia
webdunia
webdunia

ಮೂವರು ಕಾಮುಕ ಯುವಕರಿಂದ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ

ಮೂವರು ಕಾಮುಕ ಯುವಕರಿಂದ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ
ಜೈಪುರ್ (ರಾಜಸ್ಥಾನ) , ಶುಕ್ರವಾರ, 29 ಜನವರಿ 2016 (19:46 IST)
ಎಸ್‌ಎಂಎಸ್ ಕ್ರೀಡಾಂಗಣದ ಗೇಟ್ ಬಳಿ 28 ವರ್ಷ ವಯಸ್ಸಿನ ನರ್ಸ್ ಮೇಲೆ ಮೂವರು ಯುವಕರು ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ವರದಿಯಾಗಿದೆ.
 
ಇಂದು ಬೆಳಗಿನ ಜಾವ ಐದು ಗಂಟೆಗೆ ಆಸ್ಪತ್ರೆಗೆ ತೆರಳುತ್ತಿದ್ದ ನರ್ಸ್ ರಾಮ್ ಬಾಗ್ ವೃತ್ತದ ಬಳಿ ಬರುತ್ತಿದ್ದಂತೆ ದ್ವಿಚಕ್ರ ವಾಹನದಲ್ಲಿ ಬಂದಜ ಮೂವರು ಯುವಕರು ಆಕೆಯನ್ನು ಅಪಹರಿಸಿ ನಿರ್ಜನವಾಗಿದ್ದ ಎಸ್‌ಎಂಎಸ್ ಕ್ರೀಡಾಂಗಣದ ಗೇಟ್ ಬಳಿ ಕರೆದುಕೊಂಡು ಬಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. 
 
ಸಂಗಾನೇರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ನರ್ಸ್, ಗಾಂಧಿ ನಗರ್ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾಳೆ. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಆರೋಪಿಗಳ ಬಗ್ಗೆ ಸುಳಿವು ದೊರೆತಿದ್ದು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ 25 ವರ್ಷದ ವಿವಾಹಿತ ಮಹಿಳೆಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಗುತ್ತಿಗೆದಾರನೊಬ್ಬನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
 
ಗುತ್ತಿಗೆದಾರ ಬನ್ನಾಜಿ ಶ್ಯಾಮ್‌ನಗರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ವಿವಾಹಿತ ಮಹಿಳೆಗೆ ಉದ್ಯೋಗದ ಆಮಿಷ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.   

Share this Story:

Follow Webdunia kannada