ನಗರಾಡಳಿತ ಚುನಾವಣೆಗಳಲ್ಲಿ ಶಿವಸೇನೆ ಜತೆಗಿನ ಮೈತ್ರಿಗೆ ಸಂಬಂಧಿಸಿದಂತೆ ಬಿಜೆಪಿ ನಂಬರ್ ಗೇಮ್ ಆಡಲು ನಿರ್ಧರಿಸಿದೆ. ಗೌರವಾನ್ವಿತ ಸೀಟು ಹಂಚಿಕೆ ಸೂತ್ರದ ಮೇಲೆ ಮೈತ್ರಿಯನ್ನು ನವೀಕರಣಗೊಳಿಸುವುದು ಬಿಜೆಪಿ ಯೋಜನೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ಸಚಿವರೊಬ್ಬರು, ಮೈತ್ರಿ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಕೆಲವು ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರ ಜತೆ ಜತೆ ಮಾತನಾಡಲಾಗಿದೆ. ಎರಡು ಪಕ್ಷಗಳ ಹಿತಾಸಕ್ತಿಗನುಗುಣವಾದ ದೃಷ್ಟಿಕೋನ ಹಿರಿಯ ನಾಯಕರಿಂದ ವ್ಯಕ್ತವಾಗಿದೆ. ಬಿಜೆಪಿಗೆ 95 ರಿಂದ 100 ಸೀಟುಗಳ ಹಂಚಿಕೆಯಾದರೆ ಮಾತ್ರ ಮೈತ್ರಿ ನವೀಕರಣ ಮಾಡಿಕೊಳ್ಳುವ ಇಂಗಿತ ಅವರದು. ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ 2012ರ ಸೀಟು ಹಂಚಿಕೆ ಸೂತ್ರ ಈಗ ಪ್ರಸ್ತುತವಲ್ಲ. 2014ರ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ ಎಂದಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೈತ್ರಿ ಪರ ಒಲವನ್ನು ಹೊಂದಿದ್ದಾರೆ. ಆದರೆ ಅನೇಕ ಲೋಕಸಭಾ ಸಂಸದರು ಮತ್ತು ಶಾಸಕರು ಮೈತ್ರಿಗೆ ವಿರುದ್ಧವಾಗಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ