Webdunia - Bharat's app for daily news and videos

Install App

ಭಗವದ್ಗೀತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆಸ್ಟ್ರೇಲಿಯಾ ಸಂಸದ

Webdunia
ಗುರುವಾರ, 14 ಮೇ 2015 (09:53 IST)
ಆಸ್ಟ್ರೇಲಿಯಾದ ಸಂಸದರೊಬ್ಬರು ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ  ಹಿಂದೂಗಳ ಪವಿತ್ರ ಗೃಂಥ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆಸ್ಟ್ರೇಲಿಯಾದ ಮೊದಲ ಸಂಸದ ಎಂದೆನಿಸಿದ್ದಾರೆ.

 
ಆಸ್ಟ್ರೇಲಿಯಾ ಸಂಸತ್‌ಗೆ ಮೊದಲ ಬಾರಿ ಆಯ್ಕೆಯಾಗಿರುವ ಡೇನಿಯಲ್ ಮುಖಿ (32)ಭಾರತೀಯ ಮೂಲದವರಾಗಿದ್ದು, ಅವರ ಪೋಷಕರು ಪಂಜಾಬ್‌ನವರಾಗಿದ್ದಾರೆ. 
 
"ಇದೊಂದು ಹೆಮ್ಮೆಯ ಕ್ಷಣ. ಪರಮ ಪವಿತ್ರ ಗೃಂಥ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ನಿಜಕ್ಕೂ ಗೌರವದ ಸಂಗತಿ. ಬೈಬಲ್, ಕುರಾನ್‌ನಂತೆ ಗೀತೆ ಸಹ ವಿಶ್ವದ ಮಹಾನ್ ಧಾರ್ಮಿಕ ಗೃಂಥಗಳಲ್ಲೊಂದು. ಬಾಲ್ಯದಿಂದಲೂ ಇದು ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿದೆ", ಎಂದು ಅಭಿಮಾನದಿಂದ ಹೇಳುತ್ತಾರೆ ಡೇನಿಯಲ್.
 
32ರ ಹರೆಯದ ಡೇನಿಯಲ್ ಲೇಬರ್ ಪಕ್ಷವನ್ನು ಪ್ರತಿನಿಧಿಸುತ್ತಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments