Webdunia - Bharat's app for daily news and videos

Install App

ಹೆಂಡತಿ ಮೇಲೇ ಅತ್ಯಾಚಾರಕ್ಕೆ ಸ್ನೇಹಿತನಿಗೆ ಸಹಕರಿಸಿದ ಪತಿ..!

Webdunia
ಮಂಗಳವಾರ, 14 ಮಾರ್ಚ್ 2017 (14:58 IST)
ಹೈದರಾಬಾದ್(ಮಾ.14): ಜಗತ್ತಿನಲ್ಲಿ ಎಂಥೆಂಥಾ ಪಾಪಿಗಳಿರುತ್ತಾರೆ ನೋಡಿ.. ತನ್ನ ಹೆಂಡತಿ ಮಮೇಲೇ ಅತ್ಯಾಚಾರ ನಡೆಸಲು ವ್ಯಕ್ತಿಯೊಬ್ಬ ಸ್ನೇಹಿತಬಿಗೆ ಸಹಕರಿಸಿದ ಪ್ರಕರಣ ಹೈದರಾಬಾದ್`ನ ಕಾಂಚನ್ ಬಾಗ್`ನಲ್ಲಿ  ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮೊಹಮ್ಮದ್ ಸಲ್ಲಿಮುದ್ದೀನ್  ಮತ್ತು ಅವನ ತಾಯಿಯನ್ನ ಬಂಧಿಸಲಾಗಿದೆ.

ಮೊದಲಿಗೆ ಪತ್ನಿಯನ್ನ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪತಿ, ಬಳಿಕ ಸ್ನೇಹಿತನಿಗೆ ಕುಮಕ್ಕು ನೀಡಿ ಅತ್ಯಾಚಾರಕ್ಕೆ ಸಹಕರಿಸಿದ್ದ ಎಂದು ಆರೋಪಿಸಲಾಗಿದೆ.

2016ರಲ್ಲಿ ಮದುವೆಯಾಗಿದ್ದ ಮೊಹಮ್ಮದ್ ಉನ್ನತ ವ್ಯಾಸಂಗಕ್ಕೆ ಆಸ್ಟ್ರೇಲಿಯಾಗೆ ತೆರಳಿದ್ದ. ಅಲ್ಲಿಂದಲೇ ಹೈದರಾಬಾದ್`ನಲ್ಲಿದ್ದ ಪತ್ನಿಗೆ ಬೆತ್ತಲಾಗಿ ವಿಡಿಯೋ ಚಾಟ್ ನಡೆಸುವಂತೆ ಒತ್ತಾಯಿಸುತ್ತಿದ್ದ. ಬೆತ್ತಲೆ ಫೋಟೋ, ವಿಡಿಯೋ ಕಳುಹಿಸಲು ಕೇಳುತ್ತಿದ್ದ. ಬೇರೆ ದಾರಿಯಿಲ್ಲದೆ ಗಂಡ ಹೇಳಿದಂತೆ ಪತ್ನಿ ನಡೆದುಕೊಂಡಿದ್ದಾಳೆ. ಈ ವಿಡಿಯೋಗಳನ್ನ ಸಲೀಮ್ ಸ್ನೇಹಿತನಿಗೂ ತೋರಿಸುತ್ತಿದ್ದ ಎಂದು ತಿಳಿದುಬಂದಿದೆ.

ಫೆಬ್ರವರಿ 13ರಂದು ಮನೆಗೆ ಬಂದ ಸಲೀಮ್ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಸ್ವಲ್ಪ ದಿನಗಳ ಬಳಿಕ ಸ್ನೇಹಿತ ಚಾಂದ್ ಎಂಬಾತನನ್ನೂ ಮನೆಗೆ ಕರೆ ತಂದಿದ್ದಾನೆ. ರಾತ್ರಿ ಪತ್ನಿಗೆ ನಿದ್ದೆ ಮಾತ್ರೆ ನೀಡಿದ್ದಾನೆ. ಈ ಸಂದರ್ಣ ಸನಿಹಕ್ಕೆ ಬರುತ್ತಿದ್ದ ಗಂಡನ ಜೊತೆ ಬೇರೊಬ್ಬ ಸ್ನೇಹಿತನೂ ಇದ್ದದ್ದು ಗೊತ್ತಾಗಿದೆ. ಅಷ್ಟರೊಳಗೆ ನಿದ್ದೆಗೆ ಜಾರಿದ ಪತ್ನಿ ಮೇಲೆ ಸ್ನೇಹಿತ ಚಾಂದ್ ಲೈಂಗಿಕ ಸಂಪರ್ಕ ನಡೆಸಲು ಸಲೀಮ್ ಸಹಕರಿಸಿದ್ದಾನೆ.

ಬೆಳಗ್ಗೆ ಎದ್ದಾಗ ಪತ್ನಿಗೆ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾಳೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್ ಕೇಂದ್ರ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್‌, ಕಾರಣ ಹೀಗಿದೆ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಬಾಲಕಿ ಮೇಲೆ ಅತ್ಯಾಚಾರ: 20ವರ್ಷ ಜೈಲು

ಮೊದಲ ಹಂತದಲ್ಲೇ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ: ಮಧು ಬಂಗಾರಪ್ಪ

ಏರ್‌ ಇಂಡಿಯಾ ವಿಮಾನ ಅಪಘಾತ: ಕೊನೆಗೂ ಪ್ರಾಥಮಿಕ ವರದಿ ಸಿದ್ದ, 2 ಪುಟಗಳ ವರದಿ ಸಲ್ಲಿಕೆ

ಹುಬ್ಬಳ್ಳಿ- ಧಾರವಾಡದ 65 ಪೊಲೀಸ್ ಅಧಿಕಾರಿಗಳಿಗೆ ಬೊಜ್ಜು ಕರಗಿಸುವ ಟ್ರೈನಿಂಗ್,4ರಿಂದ 11ಕೆಜಿ ಇಳಿಕೆ

ಮುಂದಿನ ಸುದ್ದಿ