Select Your Language

Notifications

webdunia
webdunia
webdunia
webdunia

ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ ಅನಿವಾಸಿ ಭಾರತೀಯ ವೈದ್ಯನ ಬಂಧನ

ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ ಅನಿವಾಸಿ ಭಾರತೀಯ ವೈದ್ಯನ ಬಂಧನ
ಜಮ್ಮು , ಸೋಮವಾರ, 3 ಆಗಸ್ಟ್ 2015 (18:40 IST)
ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಅನಿವಾಸಿ ಭಾರತೀಯ ವೈದ್ಯ ಸೇರಿದಂತೆ ಇತರ ಮೂವರನ್ನು ಬಂಧಿಸಿದ್ದಾರೆ.
 
ಅನಿವಾಸಿ ವೈದ್ಯ ಕೆಲ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ್ದಾನೆ ಎನ್ನಲಾಗಿದೆ, ವೈದ್ಯನನ್ನು ಬಂಧಿಸಿದ ಪೊಲೀಸರು ಆತನ ಹವಾಲಾ ರಾಕೆಟ್ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ವೈದ್ಯನೊಂದಿಗೆ ಬಂಧಿಸಿದ ಇತರ ಮೂವರು ಕೂಡಾ ಇತನ ಸಂಬಂಧಿಕರಾಗಿದ್ದಾರೆ. ಸಂಬಂಧಿಕರು ವೈದ್ಯನನ್ನು ವಿಮಾನ ನಿಲ್ದಾಣಕ್ಕೆ ಬೀಳ್ಕೊಡಲು ಬಂದಾಗ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಆರೋಪಿ ಅನಿವಾಸಿ ವೈದ್ಯ ಜಮ್ಮು ಕಾಶ್ಮಿರದ ಬುದಗಾಮ್ ಜಿಲ್ಲೆಯ ಚಾಡೋರಾ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 

Share this Story:

Follow Webdunia kannada