Select Your Language

Notifications

webdunia
webdunia
webdunia
webdunia

ಚೆನ್ನೈ: ಸೆಲ್ಫಿಗಾಗಿ ಜೀವತೆತ್ತ ಬಾಲಕ

ಚೆನ್ನೈ: ಸೆಲ್ಫಿಗಾಗಿ ಜೀವತೆತ್ತ ಬಾಲಕ
ಚೆನ್ನೈ , ಸೋಮವಾರ, 1 ಫೆಬ್ರವರಿ 2016 (12:41 IST)
ಸೆಲ್ಫಿ ಕ್ರೇಜ್‌  ಬೆಳೆಸಿಕೊಂಡಿರುವ ಯುವ ಜನಾಂಗ ಅದಕ್ಕಾಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ದಾರುಣ ಘಟನೆಗಳು ಇತ್ತೀಚಿಗೆ ಪದೇ ಪದೇ ವರದಿಯಾಗುತ್ತಿವೆ.  ಚೆನ್ನೈನ ವಿದ್ಯಾರ್ಥಿಯೊಬ್ಬ ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಚೆನ್ನೈನಲ್ಲಿ ನಡೆದಿದೆ. 

 
ಮೃತನನ್ನು 16 ವರ್ಷದ ದಿನೇಶ್ ಎಂದು ಗುರುತಿಸಲಾಗಿದ್ದು, ತನ್ನ ಸ್ನೇಹಿತರ ಜತೆಯಲ್ಲಿ ನಗರದಲ್ಲಿರುವ ವಂಡಲೂರ್ ಜೈವಿಕ ಉದ್ಯಾವನವೊಂದಕ್ಕೆ ಭೇಟಿ ನೀಡಿ ಮರಳುತ್ತಿದ್ದ ಆತ ತನ್ನ ಗೆಳೆಯರೊಂದಿಗೆ ಎಲೆಕ್ಟ್ರಿಕ್ ರೈಲಿನ ಮುಂದೆ ಸೆಲ್ಫಿ ತೆಗೆಯಲು ಹೋಗಿದ್ದಾನೆ. ಆದರೆ ವೇಗವಾಗಿ ಬರುತ್ತಿದ್ದ ರೈಲಿನಡಿಯಲ್ಲಿ ಸಿಕ್ಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. 
 
ಮೃತ ದಿನೇಶ್ 11 ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದೆ. 
 
ಸೆಲ್ಫಿಯಿಂದಾಗಿ ಜಗತ್ತಿನಾದ್ಯಂತ ಸಂಭವಿಸಿರುವ ಸಾವುಗಳಲ್ಲಿ (27) ಅರ್ಧದಷ್ಟು ಭಾರತದಲ್ಲೇ ಆಗಿವೆ ಎಂದು ಇತ್ತೀಚಿಗೆ ವರದಿಯೊಂದು ಪ್ರಕಟವಾಗಿತ್ತು. 
 
ಕಳೆದ ತಿಂಗಳು ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರಕ್ಕೆ ಬಿದ್ದ ಯುವತಿಯನ್ನು ರಕ್ಷಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಲಿಕ ಮುಂಬೈ ಪೊಲೀಸ್  16 -ನೋ ಸೆಲ್ಫಿ ಝೋನ್‌ನ್ನು ಗುರುತಿಸಿದ್ದಾರೆ.
 

Share this Story:

Follow Webdunia kannada