Select Your Language

Notifications

webdunia
webdunia
webdunia
webdunia

ಅಮೀರ್‌ಖಾನ್‌ಗೆ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ: ಮಮತಾ ಗುಡುಗು

ಅಮೀರ್‌ಖಾನ್‌ಗೆ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ: ಮಮತಾ ಗುಡುಗು
ಕೋಲ್ಕತಾ , ಗುರುವಾರ, 26 ನವೆಂಬರ್ 2015 (20:01 IST)
ಬಾಲಿವುಡ್ ನಟ ಅಮೀರ್ ಖಾನ್‌ಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅದು ತಪ್ಪೋ ಸರಿಯೋ ಅಮೀರ್ ಖಾನ್‌ಗೆ ತನಗೆ ಅನ್ನಿಸಿದ್ದನ್ನು ಹೇಳುವ ಹಕ್ಕಿದೆ. ಅವರಿಗೆ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಗುಡುಗಿದ್ದಾರೆ.
 
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯಿಂದಾಗಿ ಮಗುವಿನ ಸುರಕ್ಷತೆಗಾಗಿ ಬೇರೆ ದೇಶಕ್ಕೆ ತೆರಳುವ ಬಗ್ಗೆ ಪತ್ನಿ ಕಿರಣ್ ರಾವ್ ಚರ್ಚಿಸಿದ್ದಳು ಎಂದು ಅಮೀರ್‌ಖಾನ್ ಹೇಳಿರುವುದು ತಪ್ಪು ಅಥವಾ ಸರಿಯೋ ಅದು ಅವರ ವ್ಯಯಕ್ತಿಕ ಹಕ್ಕಾಗಿದೆ ಎಂದಿದ್ದಾರೆ. 
 
ಆತನ ಪತ್ನಿ ತನ್ನ ಮನಸ್ಸಿನಲ್ಲಿರುವುದನ್ನು ಹೇಳಿದ್ದಾಳೆ. ಆಕೆ ಹೇಳಿದ್ದನ್ನು ಅಮೀರ್ ಹೇಳಿದ್ದಾರೆ. ಇದು ಅವರ ಪ್ರಜಾಪ್ರಭುತ್ವದ ಹಕ್ಕು. ಆದರೆ, ಅವರನ್ನು ದೇಶ ಬಿಟ್ಟು ತೆರಳುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಕಿಡಿಕಾರಿದ್ದಾರೆ.
 
ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಗುಡುಗಿದ ಮಮತಾ, ಕೆಲ ವ್ಯಕ್ತಿಗಳು ಭಾರತ ದೇಶ ಕೇವಲ ತಮಗಾಗಿ ಮಾತ್ರ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 
 
ಭಾರತ ನಾವು ಹುಟ್ಟಿದ ದೇಶ, ನಮ್ಮ ಕರ್ಮಭೂಮಿ. ಪಾಕಿಸ್ತಾನಕ್ಕೆ ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ಬೇಕಾಗಿದ್ದಲ್ಲಿ ನೀವು ಹೋಗಿ, ನಾವೆಲ್ಲಾ ಭಾರತೀಯರು ಎಂದು ಬಿಜೆಪಿ, ಸಂಘ ಪರಿವಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada