Select Your Language

Notifications

webdunia
webdunia
webdunia
webdunia

ರಾಹುಲ್ ಯು-ಟರ್ನ್ ಹೊಡೆದಿಲ್ಲ- ದಿಗ್ವಿಜಯ್ ಸಿಂಗ್

ರಾಹುಲ್ ಯು-ಟರ್ನ್ ಹೊಡೆದಿಲ್ಲ- ದಿಗ್ವಿಜಯ್ ಸಿಂಗ್
ನವದೆಹಲಿ , ಶುಕ್ರವಾರ, 26 ಆಗಸ್ಟ್ 2016 (15:36 IST)
ಮಹಾತ್ಮಾ ಗಾಂಧಿ ಅವರನ್ನು ಕೊಂದಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ತಮ್ಮ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯು-ಟರ್ನ್ ತೆಗೆದುಕೊಂಡಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
 
ಮಹಾತ್ಮಾ ಗಾಂಧಿಯನ್ನು ಕೊಂದಿದ್ದು ಸಂಘಕ್ಕೆ ಸೇರಿದ ವ್ಯಕ್ತಿ ಎಂಬ ತಮ್ಮ ಹೇಳಿಕೆಗೆ ರಾಹುಲ್ ಬದ್ಧರಾಗಿದ್ದಾರೆ. ಅವರು ಯು-ಟರ್ನ್ ತೆಗೆದುಕೊಂಡಿಲ್ಲ. ಗಾಂಧಿ ಅವರನ್ನು ಕೊಂದಿದ್ದು ಸಂಘದ ಸದಸ್ಯನೇ. ದ್ವೇಷ ಮತ್ತು ಹಿಂಸೆಯ ಸಿದ್ಧಾಂತವೇ ಮಹಾತ್ಮಾ ಗಾಂಧಿ ಅವರನ್ನು ಕೊಂದಿದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸರಣಿ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ. 
 
"ಆರ್‌ಎಸ್ಎಸ್ ಬಗ್ಗೆ ರಾಹುಲ್ ಗಾಂಧಿ ಯು-ಟರ್ನ್ ಮಾಡಿಲ್ಲ. ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಗಾಂಧಿ ಕೊಂದವನು ಆರ್‌ಎಸ್ಎಸ್ ನವನು. ದ್ವೇಷದ ಮತ್ತು ಹಿಂಸೆಯ ಸಿದ್ಧಾಂತ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ್ದು" ಎಂದು ಸರಣಿ ಟ್ವೀಟ್ ಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. 
 
ಬುಧವಾರ ರಾಹುಲ್ ಮಹಾತ್ಮಾ ಗಾಂಧಿ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಹಾಜರಿದ್ದ ವಕೀಲರು ಹತ್ಯೆ ಹಿಂದೆ ಆರ್‌ಎಸ್ಎಸ್ ಸಂಸ್ಥೆ ಕೈವಾಡವಿದೆ ಎಂದು ರಾಹುಲ್ ಆರೋಪಿಸಿರಲಿಲ್ಲ. ಸಂಘದ ಜತೆ ಸಂಪರ್ಕ ಹೊಂದಿರುವವರು ಹತ್ಯೆಯ ಹಿಂದಿದ್ದಾರೆ ಎಂದು ಹೇಳಿದ್ದರು ಎಂದಿದ್ದರು. 
 
2015ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ಪ್ರಚಾರವೊಂದರಲ್ಲಿ ಪಾಲ್ಗೊಂಡಿದ್ದ ರಾಹುಲ್ 
 
2014ರಲ್ಲಿ ಭಿವಂಡಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ರಾಹುಲ್, ಸಂಘದ ಸದಸ್ಯರು ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದಿದ್ದರು ಎಂದು ಆರೋಪಿಸಿದ್ದರು.
 
'ಆರ್‌ಎಸ್ಎಸ್ ಜನರು ಗಾಂಧೀಜಿಯವರನ್ನು ಕೊಂದರು. ಸರ್ದಾರ್ ಪಟೇಲ್ ಮತ್ತು ಗಾಂಧಿಯವರನ್ನು ಅವರು ವಿರೋಧಿಸುತ್ತಿದ್ದರು', ಎಂದು ರಾಹುಲ್ ಹೇಳಿದ್ದರು. 
 
ಈ ಹೇಳಿಕೆ ಬಹುದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಗೆ ಸಂಬಂಧಿಸಿದಂತೆ ಆರ್‌ಎಸ್ಎಸ್‌ನ ಭಿವಂಡಿ ಘಟಕದ ಕಾರ್ಯದರ್ಶಿ ರಾಜೇಶ್ ಕುಂಟೆ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಸಂಪುಟ ಸಹೋದ್ಯೋಗಿಗಳಿಗಿಂತ ಮೋದಿ ಬಡವರು