Webdunia - Bharat's app for daily news and videos

Install App

ಸೀಮಿತ ದಾಳಿ ಅಲ್ಲ, ಗಡಿಯಾಚೆಗಿನ ಫೈರಿಂಗ್ ಅಷ್ಟೇ: ಪಾಕ್ ರಾಯಭಾರಿ

Webdunia
ಗುರುವಾರ, 13 ಅಕ್ಟೋಬರ್ 2016 (16:53 IST)
ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತೀಯ ಸೈನಿಕರು ಸೀಮಿತ ದಾಳಿ ನಡೆಸಿರುವುದು ಸುಳ್ಳು ಎನ್ನುವುದನ್ನು ಮುಂದುವರೆಸಿರುವ ಪಾಕಿಸ್ತಾನ, ನಡೆದಿದ್ದು ಗಡಿಯಾಚೆಗಿನ ಫೈರಿಂಗ್ ಅಷ್ಟೇ ಎಂದಿದೆ. 

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿರುವುದು ಸೀಮಿತ ದಾಳಿ ಅಲ್ಲ. ಅದು ಗಡಿಯಾಚೆಗಿನ ಫೈರಿಂಗ್ ಅಷ್ಟೇ. ಸೀಮಿತ ದಾಳಿ ನಡೆದಿದ್ದದ್ದೇ ಆದರೆ ನಾವು ಸಹ ತಕ್ಕ ಉತ್ತರ ನೀಡುತ್ತಿದ್ದೆವು ಎಂದು ಭಾರತದಲ್ಲಿರುವ ಪಾಕ್ ರಾಯಭಾರಿ ಅಬ್ಲುಲ್ ಬಸಿತ್ ಬುಧವಾರ ಹೇಳಿದ್ದಾರೆ.
 
ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಮಾತನ್ನಾಡುತ್ತಿದ್ದ ಬಸಿತ್, ಅದು ಸೀಮಿತ ದಾಳಿ ಅಲ್ಲ. ಅಂತಹದ್ದೇನೂ ಅಲ್ಲಿ ನಡೆದಿಲ್ಲ. ಹಾಗಾಗಿದ್ದರೆ ಪಾಕ್ ಪ್ರತೀಕಾರ ತೀರಿಸಿಕೊಳ್ಳುತ್ತಿತ್ತು. ಭಾರತೀಯ ಸೇನೆ ನಡೆಸಿದ್ದು ಗಡಿಯಾಚೆಗಿನ ಫೈರಿಂಗ್ ಅಷ್ಟೇ ಎಂದು ವಾದಿಸಿದ್ದಾರೆ.
 
ದಾಳಿಯಿಂದ ಪಾಕ್‌ಗೆ ಯಾವ ಸಂದೇಶ ತಲುಪಿದೆ ಎಂದು ಕೇಳಿದ್ದಕ್ಕೆ , ಸೀಮಿತ ದಾಳಿಯೇ ನಡೆದಿಲ್ಲದಿರುವಾಗ, ಪಾಕ್ ಸಂದೇಶ ಪಡೆದುಕೊಳ್ಳುವ ಪ್ರಶ್ನೆ ಎಲ್ಲಿಯದು ಎಂದಿದ್ದಾರೆ ಬಸಿತ್. 
 
ಪ್ರಮುಖ ಪಾಕ್ ಮಾಧ್ಯಮಗಳು ಸಹ ಸೀಮಿತ ದಾಳಿಯ ಬಗ್ಗೆ ಬರೆದಿವೆ ಎಂದು ಕಾಲೆಳೆಯಲಾಗಿ, ಮಾಧ್ಯಮ ವರದಿಗಳ ಬಗ್ಗೆ ತಾವು ಪ್ರತಿಕ್ರಿಯಿಸಲಾಗುವುದಿಲ್ಲ ಎಂದವರು ಜಾರಿಕೊಂಡಿದ್ದಾರೆ.
 
"ನಿಮ್ಮ ಇಡೀ ಪ್ರವಚನ ಮಾಧ್ಯಮ ವರದಿಗಳು ಆಧರಿಸಿದೆ. ಸೀಮಿತ ದಾಳಿ ನಡೆದೇ ಇಲ್ಲ ಎಂಬುವುದು ನನ್ನ ನಿಲುವು ಎಂದಿದ್ದಾರೆ ಅವರು.
 
ಉರಿ ದಾಳಿಯ ಬಳಿಕ ಪಾಕಿಸ್ತಾನ ಅಂತರಾಷ್ಟ್ರೀಯವಾಗಿ ಏಕಾಂಗಿಯಾಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳುತ್ತಿರೋ ಎಂದು ಪ್ರಶ್ನಿಸಲಾಗಿ, ಯಾವುದೇ ಇತರ ದೇಶಕ್ಕಿಂತ ಭಯೋತ್ಪಾದನೆಯಿಂದ ಹೆಚ್ಚು ಬಾಧೆಗೊಳಗಾಗಿರುವುದು ಪಾಕಿಸ್ತಾನ ಎಂದುತ್ತರಿಸಿದ್ದಾರೆ ಬಸಿತ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments