Select Your Language

Notifications

webdunia
webdunia
webdunia
webdunia

ಬದೌನ್ ಪ್ರಕರಣ: ರೇಪ್ ಆಗಿಲ್ಲ, ಕೊಲೆಯೂ ನಡೆದಿಲ್ಲ, ಇದು ಆತ್ಮಹತ್ಯೆ!

ಬದೌನ್ ಪ್ರಕರಣ: ರೇಪ್ ಆಗಿಲ್ಲ, ಕೊಲೆಯೂ ನಡೆದಿಲ್ಲ, ಇದು ಆತ್ಮಹತ್ಯೆ!
ಲಖನೌ , ಗುರುವಾರ, 27 ನವೆಂಬರ್ 2014 (11:44 IST)
ವಿಶ್ವದಾದ್ಯಂತ ಖಂಡನೆಗೆ  ಒಳಗಾಗಿದ್ದ ಬದೌನ್ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಬಾಲಕಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಿಬಿಐ ವರದಿ ಹೇಳಿದೆ.

ಕಳೆದ ಮೇ 28 ರಂದು ಹದಿವಯಸ್ಸಿನ ಸಹೋದರಿಯರಿಬ್ಬರು ತಮ್ಮ ಮನೆಯ ಹಿಂದುಗಡೆ ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರಿಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ಐವರನ್ನು ಬಂಧಿಸಲಾಗಿತ್ತು. ಈ ಘಟನೆ ದೇಶ, ವಿದೇಶಗಳಲ್ಲಿ ಖಂಡನೆಗೆ ಗುರಿಯಾಗಿತ್ತು. ದೇಶದ ಹಿರಿಯ ನಾಯಕರು ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯರ ಮರಣಕ್ಕೆ ಸಂತಾಪ ವ್ಯಕ್ತಪಡಿಸಿದ್ದರು.
 
ಬಾಲಕಿಯರ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಿಂದ ಸಾಬೀತಾದಾಗ ಇದು ಮರ್ಯಾದಾ ಹತ್ಯೆಯಾಗಿರಬಹುದೇ ಎಂಬ ಚರ್ಚೆಗಳು ಪ್ರಾರಂಭವಾಗಿದ್ದವು. ನಂತರ ಇದು ಲವ್ ಜಿಹಾದ್ ಎಂಬ ಸುದ್ದಿಯೂ ಹರಿದಾಡುತ್ತಿತ್ತು
 
ಈ ಎಲ್ಲ ಗೊಂದಲಗಳು ಮತ್ತು ಎಲ್ಲ ಕಡೆಯಿಂದ ಬಂದ ಒತ್ತಡ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಲು ಪ್ರೇರೇಪಿಸಿತ್ತು. ಸತತ 5 ತಿಂಗಳು ಈ ಕುರಿತು ತನಿಖೆ ನಡೆಸಿದ ಸಿಬಿಐ ಇದೊಂದು ಕೊಲೆ ಎನ್ನಲು ಸಾಕ್ಷ್ಯಾಧಾರಗಳಿಲ್ಲ ,ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಿದೆ.
 
ದೇಶಾದ್ಯಂತ ವಿವಾದ ಸೃಷ್ಟಿಸಿದ್ದ ಈ ಪ್ರಕರಣದಿಂದಾಗಿ ಅಖಿಲೇಶ್ ಯಾದವ್ ಸರಕಾರ ತಲೆ ತಗ್ಗಿಸುವಂತಾಗಿತ್ತು. ಆದರೆ  ಸಿಬಿಐನ ಈ ತೀರ್ಪು ಸಮಾಜವಾದಿ ಸರಕಾರಕ್ಕೆ ನಿರಾಳತೆಯನ್ನು ತಂದು ಕೊಟ್ಟಿದೆ. 

Share this Story:

Follow Webdunia kannada