Webdunia - Bharat's app for daily news and videos

Install App

ಸಿಎಂ ನಿತೀಶ್ ಕುಮಾರ್‌ರನ್ನು ಸ್ಫೋಟಿಸುವುದಾಗಿ ಜೀವ ಬೆದರಿಕೆ ಎಸ್‌ಎಂಎಸ್ ಸಂದೇಶ

Webdunia
ಗುರುವಾರ, 26 ನವೆಂಬರ್ 2015 (21:39 IST)
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಹತ್ಯೆ ಮಾಡಲಾಗುವುದು ಎನ್ನುವ ಮೊಬೈಲ್ ಸಂದೇಶವೊಂದು ಖಾಸಗಿ ಚಾನೆಲ್‌ಗೆ ತಲುಪಿದ್ದು, ನಿತೀಶ್ ಅವರಿಗೆ ನೀಡಲಾದ ಭಧ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ವೈಭವ್ ಮಾತನಾಡಿ, ಎಸ್‌ಎಂಎಸ್ ಆಧಾರದ ಮೇಲೆ ಕೃಷ್ಣಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.   
 
ಕಶಿಶ್ ಟಿವಿ ಚಾನೆಲ್ ಎಸ್ಎಂಎಸ್ ಸ್ವೀಕರಿಸಿದ್ದು, ಎಸ್‌ಎಂಎಸ್ ಸಂದೇಶ ಹೊರರಾಜ್ಯದಿಂದ ಬಂದಿದೆ. ಎಸ್‌ಎಂಎಸ್ ಬಂದಿರುವ ಸಂಖ್ಯೆಯನ್ನು ಕಾರ್ಯಕ್ರಮದಲ್ಲಿ ಬಿತ್ತರಿಸಲಾಗುವುದು ಎಂದು ಚಾನೆಲ್ ಮೂಲಗಳು ತಿಳಿಸಿವೆ. ಆದರೆ, ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
 
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಝಡ್‌ ಪ್ಲಸ್ ಭಧ್ರತೆ ನೀಡಲಾಗಿದ್ದು, ಇದೀಗ ಬೆದರಿಕೆ ಕರೆ ಬಂದ ನಂತರ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಪಟ್ನಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ವೈಭವ್ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments