Select Your Language

Notifications

webdunia
webdunia
webdunia
webdunia

ಸ್ವ ಮೂತ್ರದಿಂದಲೇ ಹೂಗಿಡಗಳನ್ನು ಬೆಳೆಸುತ್ತಾರಂತೆ ಈ ಕೇಂದ್ರ ಸಚಿವರು

ಸ್ವ ಮೂತ್ರದಿಂದಲೇ ಹೂಗಿಡಗಳನ್ನು ಬೆಳೆಸುತ್ತಾರಂತೆ ಈ ಕೇಂದ್ರ ಸಚಿವರು
ನಾಗಪುರ , ಮಂಗಳವಾರ, 5 ಮೇ 2015 (16:54 IST)
ತೋಟಗಾರರಿಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಒಂದು ಸಲಹೆಯನ್ನು ನೀಡಿದ್ದಾರೆ. ಗಿಡಗಳಿಗೆ ಮಾನವ ಮೂತ್ರವನ್ನು ಉಣಿಸಿ. ಇದು ಅತ್ಯಂತ ಉತ್ತಮ ಗೊಬ್ಬರ. ನಾನು ಕೂಡ ನನ್ನ ದೆಹಲಿಯ ಸರಕಾರಿ ಬಂಗಲೆಯ ಕೈದೋಟದಲ್ಲಿರುವ ಗಿಡಗಳಿಗೆ ನನ್ನ ಮೂತ್ರವನ್ನೇ ಉಣಿಸುವುದು ಎಂದು ಅವರು ಹೇಳಿದ್ದಾರೆ. 

ನಾಗಪುರದಲ್ಲಿ ತುಂತುರು ನೀರಾವರಿ ಪದ್ಧತಿ ಕುರಿತು ಮಾತನಾಡುತ್ತಿದ್ದ ಸಚಿವರು ತಮ್ಮ ಈ ಸ್ವಾನುಭವದ ಕುರಿತು ಹೇಳಿಕೊಂಡಿದ್ದಾರೆ. ನಾನು 50 ಲೀಟರ್‌ನಷ್ಟು ನನ್ನ ಮೂತ್ರವನ್ನು ಸಂಗ್ರಹಿಸಿದೆ ಮತ್ತು ತೋಟದ ಮಾಲಿಯ ಬಳಿ ಕೆಲವು ಗಿಡಗಳಿಗೆ ಇದನ್ನು ಹಾಕು ಎಂದು ತಿಳಿಸಿದೆ. ಪರಿಣಾಮ ಮಾತ್ರ ನನ್ನನ್ನೇ ದಂಗುಬಡಿಸಿತು. ಉಳಿದ ಗಿಡಗಳಿಗಿಂತ ಮೂತ್ರ ಉಣಿಸಲಾಗಿದ್ದ ಗಿಡಗಳು ಒಂದುವರೆ ಪಟ್ಟು ಎತ್ತರಕ್ಕೆ ಬೆಳೆದಿದ್ದವು ಎಂದು ಅವರು ಹೇಳಿದ್ದಾರೆ.
 
ರೈತರು ಶತಮಾನಗಳಿಂದ ಮಾನವ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಇದು ಹೊಸ ವಿಷಯ ಎಂಬಂತೆ ಬಿಂಬಿಸಿ ಗಡ್ಕರಿಯವರು ಈ ಹೇಳಿಕೆಯನ್ನು ನೀಡಿದ್ದಾದ್ದರೂ ಏಕೆ ಎಂದು ಬಿಜೆಪಿ ನಾಯಕರಲ್ಲೇ ಇರಿಸುಮುರಿಸು ಉಂಟಾಗಿದೆ.
 
ಗಡ್ಕರಿಯವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಕುಹಕದ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. 

Share this Story:

Follow Webdunia kannada