Webdunia - Bharat's app for daily news and videos

Install App

ಹಿಂದು ಮಹಿಳೆಯರು ಬೇರೆ ಸಮುದಾಯದವರನ್ನು ವಿವಾಹವಾಗಬಾರದು: ಕೇಂದ್ರ ಸಚಿವೆ

Webdunia
ಮಂಗಳವಾರ, 1 ಸೆಪ್ಟಂಬರ್ 2015 (17:24 IST)
ಹಿಂದು ಮಹಿಳೆಯರು ಬೇರೆ ಸಮುದಾಯದ ವ್ಯಕ್ತಿಗಳೊಂದಿಗೆ ವಿವಾಹವಾಗುವುದರಿಂದ ಹಿಂದು ನಾರಿ ಶಕ್ತಿಯನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಹೇಳಿದ್ದಾರೆ.
 
ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಆಹಾರ ಸಂಸ್ಕರಣಾ ಖಾತೆಯ ಕೇಂದ್ರ ಸಚಿವೆಯಾದ ನಿರಂಜನ್ ಜ್ಯೋತಿ ಪಾಲ್ಗೊಂಡು ಮಾತನಾಡಿದರು. 
 
ಇತ್ತೀಚೆಗೆ ಬಿಡುಗಡೆಯಾದ ಧರ್ಮ ಆಧಾರಿತ ಜಾತಿ ಜನಗಣತಿ ಅಂಕಿ ಸಂಖ್ಯೆಗಳು ದಿಗ್ಭ್ರಮೆ ಮೂಡಿಸಿದ್ದು ದೇಶದ ಸಮತೋಲನವನ್ನೇ ಅಲ್ಲೋಲ ಕಲ್ಲೋಲ ಮಾಡುವಂತಹದ್ದಾಗಿದೆ. ಪ್ರತಿಯೊಬ್ಬರು ಚಿಂತನೆ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
 
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಕೇಂದ್ರ ಸಚಿವೆ ನಿರಂಜನ್ ಜ್ಯೋತಿ ಸ್ಪಷ್ಟಪಡಿಸಿದ್ದಾರೆ.
 
ಕಳೆದ ಡಿಸೆಂಬರ್ ತಿಂಗಳಲ್ಲಿ ಮತದಾರರಿಗೆ ಕರೆ ನೀಡಿದ್ದ ಸಚಿವೆ ಜ್ಯೋತಿ ರಾಮ್‌ಜಾದೋಂ ಮತ್ತು ಹರಾಮ್‌ಜಾದೋ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಎಂದು ಕರೆ ನೀಡಿ ವಿವಾದಕ್ಕೊಳಗಾಗಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments