Select Your Language

Notifications

webdunia
webdunia
webdunia
webdunia

ಶಶಿಕಲಾಗೆ ಹಾಯ್ ಎಂದ ಸೈನೆಡ್ ಕಿಲ್ಲರ್ ಮಲ್ಲಿಕಾ

ಶಶಿಕಲಾಗೆ ಹಾಯ್ ಎಂದ ಸೈನೆಡ್ ಕಿಲ್ಲರ್ ಮಲ್ಲಿಕಾ
ಬೆಂಗಳೂರು , ಶನಿವಾರ, 18 ಫೆಬ್ರವರಿ 2017 (10:23 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಶಿಕಲಾ ನಟರಾಜನ್ ವಾಸವಾಗಿರುವ ಜೈಲು ಕೊಠಡಿಯ ಪಕ್ಕದಲ್ಲಿ ಕುಖ್ಯಾತ ಸರಣಿ ಹಂತಕಿ ಸೈನೆಡ್ ಮಲ್ಲಿಕಾ ಇದ್ದಾಳೆ. 
ತಮಿಳುನಾಡಿನ ಮಾಜಿ ಸಿಎಂ, ಶಶಿಕಲಾ ಆಪ್ತ ಗೆಳತಿ ಜಯಲಲಿತಾ ಅವರ ಕಟ್ಟಾ ಅಭಿಮಾನಿಯಾಗಿರುವ ಮಲ್ಲಿಕಾ ಶಶಿಕಲಾ ಅವರನ್ನು ಕಾಣುತ್ತಿದ್ದಂತೆ ಹಾಯ್ ಎಂದಿದ್ದಾಳೆ. ಮೊದಲ ದಿನ ಮಲ್ಲಿಕಾಗೆ ಯಾವುದೇ ಪ್ರತಿಕ್ರಿಯೆ ನೀಡದೆ ಶಶಿಕಲಾ ಮೌನವಹಿಸಿದ್ದಾರೆ. ಆದರೆ ಮರುದಿನ ಮಲ್ಲಿಕಾ ಮತ್ತೆ ಮತ್ತೆ ಅವರನ್ನು ಮಾತನಾಡಿಸಲು ಯತ್ನಿಸಿದ್ದು ಕೊನೆಗೆ ಶಶಿಕಲಾ ಮುಗುಳ್ನಕ್ಕು ಸುಮ್ಮನಾಗಿದ್ದಾರೆ.
 
ಚಿನ್ನಾಭರಣ ದೋಚಲು 6 ಮಹಿಳೆಯರಿಗೆ ಸೈನೈಡ್ ನೀಡಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರೋ ದೇಶದ ಮೊದಲ ಮಹಿಳಾ ಸರಣಿ ಹಂತಕಿ ಮಲ್ಲಿಕಾಗೆ ಈ ಹಿಂದೆ ಮರದಂಡನೆಯನ್ನು ವಿಧಿಸಲಾಗಿತ್ತು. ಬಳಿಕ ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಾಸ ಮತಕ್ಕೂ ಮೊದಲು ಶಶಿಕಲಾ ನಟರಾಜನ್ ಬಣಕ್ಕೆ ಆಘಾತ