ಗಂಡನ ಸಾವಿನ ಸುದ್ದಿಯನ್ನೇ ಓದಿದ ನ್ಯೂಸ್ ಆಂಕರ್

Webdunia
ಶನಿವಾರ, 8 ಏಪ್ರಿಲ್ 2017 (21:50 IST)

ತನ್ನ ಪತಿ ಸತ್ತು ಬಿದ್ದಿದ್ದಾನೆಂಬ ಸುದ್ದಿ ಕೇಳಿದ ಯಾರಿಗಾದರೂ ಎದೆ ಒಡೆದುಹೋಗುತ್ತೆ. ಅಂತಹದುರಲ್ಲಿ ನ್ಯೂಸ್ ಆಂಕರ್ ಒಬ್ಬರು ಗಂಡ ಸತ್ತ ಸುದ್ದಿಯನ್ನ ಓದುವ ಮೂಲಕ ಕೆಲಸದ ಬದ್ದತೆ ಪ್ರದರ್ಶಿಸಿರುವ ಘಟನೆ ಛತ್ತೀಸ್ ಗಢದ ಐಬಿಸಿ-24 ಚಾನಲ್`ನಲ್ಲಿ ನಡೆದಿದೆ.


ನ್ಯೂಸ್ ಆಂಕರ್ ಸುಪ್ರೀತ್ ಕೌರ್ ಸುದ್ದಿ ಓದುತ್ತಿದ್ದಾಗ ರಸ್ತೆ ಅಪಘಾತದ ಬ್ರೇಕಿಂಗ್ ನ್ಯೂಸ್ ಬಂದಿದೆ. ಗಂಡ ಸತ್ತ ವಿಷಯ ಅರಿವಿಗೆ ಬಂದರೂ ಸ್ವಲ್ಪವೂ ತೋರಿಸಿಕೊಳ್ಳದೆ ಸುದ್ದಿ ಓದಿದ್ದಾರೆ. ನೋವನ್ನ ನುಂಗಿ ಸುದ್ದಿ ಓದಿದ ಸುಪ್ರೀತ್ ಕೌರ್ ಬದ್ಧತೆ ಕಂಡು ಸಹಪಾಠಿಗಳು ನಿಬ್ಬೆರಗಾಗಿದ್ದಾರೆ.

ಬೆಳ್ಳಂ ಬೆಳಗಿನ ಬುಲೆಟಿನ್`ನಲ್ಲಿ ಮಹಾಸಮುಂದ್ ಜಿಲ್ಲೆಯಲ್ಲಿ ರೆನಾಲ್ಟ್ ಡಸ್ಟರ್ ವಾಹನ ಅಪಘಾತದ ಬಗ್ಗೆ ಫೋನ್ ಮೂಲಕ ರಿಪೋರ್ಟರ್ ವಿವರಣೆ ನೀಡುತ್ತಿದ್ದ. ವಾಹನದಲ್ಲಿದ್ದ ಐವರಲ್ಲಿ ಮೂವರು ಮೃತಪಟ್ಟಿದ್ದು, ಗುರುತು ಪತ್ತೆಯಾಗಿಲ್ಲವೆಂದು ಹೇಳಿದ್ದ. ಕೌರ್`ಗೆ ಅಷ್ಟು ಸಾಕಾಗಿತ್ತು. ತನ್ನ ಗಂಡ ನಾಲ್ವರು ಗೆಳೆಯರ ಜೊತೆ ಹೋಗಿದ್ದು ಕೌರ್`ಗೆ ಗೊತ್ತಿತ್ತು. ನ್ಯೂಸ್ ಮುಗಿಯುವವರೆಗೂ ಉಸಿರು ಬಿಗಿ ಹಿಡಿದಿದ್ದ ಕೌರ್ ನ್ಯೂಸ್ ಅವರ್ ಮುಗಿಸಿ ಬಂದು ಕುಸಿದು ಬಿದ್ದಿದ್ದಾರೆ.

ಆಕೆ ನಿಜವಾಗಿಯೂ ಧೈರ್ಯವಂತ ಮಹಿಳೆ, ಆಕೆಯನ್ನ ನಿರೂಪಕಿಯಾಗಿ ಪಡೆದಿದ್ದಕ್ಕೆ ನಾವು ಹೆಮ್ಮೆಪಡುತ್ತೇವೆ. ಇವತ್ತು ನಡೆದ ಘಟನೆ ಮಾತ್ರ ನಿಜವಾಗಿಯೂ ಶಾಕಿಂಗ್ ನ್ಯೂಸ್ ಎಂದು ಸಹಪಾಠಿಗಳು ಹೇಳಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿತ್ವಾ ಚಂಡಮಾರುತ, ದೇಶದ ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ

ಸಿದ್ದರಾಮಯ್ಯ, ಶಿವಕುಮಾರ್ ಬ್ರೇಕ್‌ಫಾಸ್ಟ್ ಭೇಟಿ ಬಗ್ಗೆ ಡಿಕೆ ಸುರೇಶ್ ಸ್ಪೋಟಕ ಹೇಳಿಕೆ

ಭ್ರಾತೃತ್ವ ಬೇರೂರಿರುವ ಭಾರತದಲ್ಲಿ ವಿವಾದ ತರವಲ್ಲ: ಮೋಹನ್ ಭಾಗವತ್

ಇವಳೆಂಥಾ ಮಗಳು, ಹೊತ್ತು ಹೆತ್ತು ಸಾಕಿದ ತಾಯಿ ಮೇಲೆಯೇ ಮಗಳ ದರ್ಪ

ದಿತ್ವಾ ಚಂಡಮಾರುತ, ಲಕ್ಷ ಮಂದಿಗೆ ಊಟ, ವಸತಿ ವ್ಯವಸ್ಥೆ ಮಾಡಿದ ತಮಿಳುನಾಡು ಸರ್ಕಾರ

ಮುಂದಿನ ಸುದ್ದಿ
Show comments