Select Your Language

Notifications

webdunia
webdunia
webdunia
webdunia

ಹೊಸ ಮನೆಗೆ ಹೋದ ಪ್ರಧಾನಿ ಮೋದಿ ತಾಯಿ ಹೀರಾಬಾ

ಹೊಸ ಮನೆಗೆ ಹೋದ ಪ್ರಧಾನಿ ಮೋದಿ ತಾಯಿ ಹೀರಾಬಾ
ಗಾಂಧೀನಗರ್ , ಶುಕ್ರವಾರ, 31 ಅಕ್ಟೋಬರ್ 2014 (13:34 IST)
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬಾ, ತಮ್ಮ ಕಿರಿಯ ಮಗ ಪಂಕಜ್ ಮೋದಿ ಗಾಂಧೀನಗರದಲ್ಲಿ ನಿರ್ಮಿಸಿರುವ ಹೊಸ ಬಂಗಲೆಗೆ ವಾಸ ಬದಲಿಸಿದ್ದಾರೆ. 

ಗುಜರಾತಿನಲ್ಲಿ ಸರಕಾರಿ ಉದ್ಯೋಗಿಯಾಗಿರುವ ಪಂಕಜ್ ಮೋದಿ ಈ ಮೊದಲು  ಇಕ್ಕಟ್ಟಾದ ಪುಟ್ಟ ಮನೆಯಲ್ಲಿ  95 ರ ಹರೆಯದ ತಾಯಿ ಹೀರಾಬಾ ಮತ್ತು ತಮ್ಮ ಪರಿವಾರದ ಇತರ ಸದಸ್ಯರೊಂದಿಗೆ ವಾಸವಾಗಿದ್ದರು. ಆ ಮನೆಯನ್ನು ತೆರವುಗೊಳಿಸಿರುವ ಅವರೀಗ ಗಾಂಧೀನಗರದ ರೈಸನ್ ಪ್ರದೇಶದಲ್ಲಿರುವ ಹೊಸ ಮನೆಗೆ ಹೋಗಿದ್ದಾರೆ. ಈ ಮನೆ ಸಂಪೂರ್ಣವಾಗಿ ಸುಸಜ್ಜಿತವಾಗಿದ್ದು, ಮನೆ ಹೊರಗೆ ಭದ್ರತಾ ಸಿಬ್ಬಂದಿಯನ್ನು ಕಾವಲಿರಿಸಲಾಗಿದೆ. 
 
ಮೋದಿಯವರಿಗೆ ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. 

Share this Story:

Follow Webdunia kannada